ವಾಲ್ಮೀಕಿ ನಿಗಮ ಹಗರಣ | ಜಪ್ತಿ ಮಾಡಿದ 6.11 ಕೋಟಿಯನ್ನು ನಿಗಮದ ಖಾತೆಗೆ ವರ್ಗಾಯಿಸುವಂತೆ ಕೋರ್ಟ್ ಆದೇಶ
Update: 2024-12-31 16:05 IST

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಪ್ತಿ ಮಾಡಿರುವ 6.11 ಕೋಟಿ ಹಣವನ್ನು ನಿಗಮನಕ್ಕೆ ವರ್ಗಾವಣೆ ಮಾಡಲು ವಿಶೇಷ ನ್ಯಾಯಾಲಯ ಎಸ್‌ಐಟಿಗೆ ನಿರ್ದೇಶನ ನೀಡಿ ಆದೇಶಿದೆ.
ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಏಳು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಧೀಶರಾದ ಕೆ.ಎಂ.ರಾಧಾಕೃಷ ಅವರು, ಪ್ರಕರಣದ ತನಿಖಾಧಿಕಾರಿ ನಿಗಮದ ಖಾತೆಯನ್ನು ಪರಿಶೀಲನೆ ನಡೆಸಿ ಖಾತರಿ ಪಡಿಸಿಕೊಂಡು 6,11,72,400 ಕೋಟಿ ರೂ. ಅನ್ನು ವರ್ಗಾವಣೆ ಮಾಡಲು ನಿರ್ದೇಶನ ನೀಡಿ ಆದೇಶಿಸಿದ್ದಾರೆ.
ಹಗರಣದ ಬಗ್ಗೆ ತನಿಖೆ ನಡೆಸಿದ ಎಸ್ಐಟಿ ಪೊಲೀಸರು, ರಾಜಕಾರಣಿ, ಬ್ಯಾಂಕ್ ಅಧಿಕಾರಿಗಳು ಸೇರಿ 15 ಆರೋಪಿಗಳು ದಾಖಲೆಗಳನ್ನು ತಿರುಚಿ, ನಿಗಮದ ಖಾತೆಯನ್ನು ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ವರ್ಗಾಯಿಸಿದ್ದನ್ನು ಪತ್ತೆ ಮಾಡಿದ್ದರು.