ಮಾಣಿಕ್ಯ ಪ್ರಕಾಶನದ ವಿವಿಧ ದತ್ತಿ ಪ್ರಕಾಶನ ಪ್ರಕಟ

Update: 2024-10-13 17:15 GMT

ಬೆಂಗಳೂರು: ಮಾಣಿಕ್ಯ ಪ್ರಕಾಶನದ 2024ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ನಿಧಿ ಪ್ರಶಸ್ತಿಗಳ ಪ್ರಕಟನೆಯಾಗಿದ್ದು, ಸಿ.ಪಿ.ನಾರಾಯಣಚಾರ್ಯ ಸ್ಮಾರಕ ದತ್ತಿ ಕಾವ್ಯ ಮಾಣಿಕ್ಯ ಪ್ರಶಸ್ತಿ 2024ಕ್ಕೆ ವಿಜಯಪುರ ಜಿಲ್ಲೆಯ ಸುಮಿತ್ ಮೇತ್ರಿ ಅವರ ‘ಈ ಕಣ್ಣುಗಳಿಗೆ ಸದಾ ನೀರಡಿಕೆ’ ಕೃತಿ ಪ್ರಥಮ ಸ್ಥಾನಕ್ಕೆ ಆಯ್ಕೆಯಾಗಿದೆ.

ಪ್ರಶಸ್ತಿಯು 3 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ಹೊಂದಿದೆ. ಹಾಸನ ಜಿಲ್ಲೆಯ ನಂದಿನಿ ಹೆದ್ದುರ್ಗ ಅವರ ‘ಒಂದು ಆದಿಮ ಪ್ರೇಮ’ ದ್ವಿತೀಯ 2ಸಾವಿರ ರೂ .ನಗದು ಮತ್ತು ಪ್ರಶಸ್ತಿ ಪುರಸ್ಕಾರ ಒಳಗೊಂಡಿದ್ದು, ಬೆಳಗಾವಿ ಜಿಲ್ಲೆಯ ಸಂತೋಷ ನಾಯಿಕ ಅವರ ‘ಹೊಸ ವಿಳಾಸದ ಹೆಜ್ಜೆಗಳು’ ತೃತೀಯ ಸ್ಥಾನಕ್ಕೆ ಆಯ್ಕೆಯಾಗಿದೆ.

ಹಿರಿಯ ಸಾಹಿತಿ ಎನ್.ಶೈಲಜಾ ಹಾಸನ ಹೆಸರಲ್ಲಿ ಕೊಡಮಾಡುವ ಎನ್.ಶೈಲಜಾ ಹಾಸನ ದತ್ತಿ - ಪ್ರಬಂಧ ಮಾಣಿಕ್ಯ ಪ್ರಶಸ್ತಿ 2024ಕ್ಕೆ ಹಾಸನ ಜಿಲ್ಲೆಯ ಸುಮಾವೀಣಾ ಅವರ ‘ಮಧುರಾನುಭೂತಿಯ ಬುತ್ತಿ’ ಕೃತಿಯು 3 ಸಾವಿರ ರೂ ನಗದು, ಪ್ರಶಸ್ತಿ ಪುರಸ್ಕಾರಕ್ಕೆ ಭಾಜನವಾಗಿದೆ.

ಪದ್ಮಾವತಿ ವೆಂಕಟೇಶ್ ದತ್ತಿ-ಕಥಾ ಮಾಣಿಕ್ಯ ಪ್ರಶಸ್ತಿ 2024(ಕಥಾ ವಿಭಾಗ)ಕ್ಕೆ ಕೊಪ್ಪಳ ಜಿಲ್ಲೆಯ ಅನಸೂಯ ಜಹಗೀರದಾರ್ ಅವರ ‘ಪರಿವರ್ತನೆ’ ಕಥಾ ಸಂಕಲನ ಆಯ್ಕೆಯಾಗಿದೆ.

ದಿ.ಶಾಂತಮ್ಮ ನಾಗರಾಜ್ ಸ್ಮಾರಕ ದತ್ತಿ-ಹಾಸ್ಯ ಮಾಣಿಕ್ಯ ಪ್ರಶಸ್ತಿ 2024(ಹಾಸ್ಯ ಪ್ರಬಂಧ ವಿಭಾಗ)ಕ್ಕೆ ಹಾಸನ ಜಿಲ್ಲೆಯ ಸುಮಾ ರಮೇಶ್ ಅವರ ‘ಹಚ್ಛೆ ದಿನ್’ ಕೃತಿಯು ಆಯ್ಕೆಯಾಗಿದೆ.

ನಿಂಗಪ್ಪ ಮಲ್ಲಪ್ಪ ಮೇಟಿ ಸ್ಮಾರಕ ದತ್ತಿ-ಗದ್ಯ ಮಾಣಿಕ್ಯ ಪ್ರಶಸ್ತಿ 2024(ಸಂಕೀರ್ಣ ವಿಭಾಗ)ಕ್ಕೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆಯ ಶಿವಲೀಲಾ ಹುಣಸಗಿಯವರ ‘ಗೋರಿಯ ಸುತ್ತ ಸಪ್ತಪದಿ ತುಳಿದಾಗ’ ಕೃತಿಯು ಆಯ್ಕೆಯಾಗಿದೆ.

ಪ್ರಶಸ್ತಿಯನ್ನು ಮಾಣಿಕ್ಯ ಪ್ರಕಾಶನದ ವತಿಯಿಂದ 2024 ನ.10ರಂದು ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಒಂಭತ್ತನೇ ಕವಿ-ಕಾವ್ಯ ಸಂಭ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News