ಆನ್ ಲೈನ್ ವಂಚನೆಗೊಳಗಾಗಿ 1.99 ಲಕ್ಷ ರೂ. ಕಳೆದುಕೊಂಡ ಶಾಸಕ ಎಚ್.ವಿಶ್ವನಾಥ್ ಪುತ್ರ
Update: 2023-08-05 07:32 GMT
ಮೈಸೂರು, ಆ.5: ಆನ್ ಲೈನ್ ವಂಚನೆಗೆ ಒಳಗಾಗಿರುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರ ಪುತ್ರ ಅಮಿತ್ ದೇವರಹಟ್ಟಿ 1.99 ಲಕ್ಷ ರೂ. ಕಳೆದುಕೊಂಡಿರುವುದು ವರದಿಯಾಗಿದೆ.
ಅಮಿತ್ ದೇವರಹಟ್ಟಿ ಎಟಿಎಂವೊಂದರಲ್ಲಿ ಹಣ ಡ್ರಾ ಮಾಡಲು ಹೋಗಿದ್ದಾರೆ. ಈ ವೇಳೆ ಹಣ ಬಾರದ ಹಿನ್ನಲೆಯಲ್ಲಿ ಗೂಗಲ್ ಮೂಲಕ ಸರ್ಚ್ ಮಾಡಿ ಬ್ಯಾಂಕ್ ಕಸ್ಟಮರ್ ಕೇರ್ ಸೆಂಟರ್ ಎಂದಿದ್ದ ಸಂಖ್ಯೆಗೆ ಕರೆ ಮಾಡಿದ್ದಾರೆ. ಈ ವೇಳೆ ಆ ಕಡೆಯಿಂದ ಮಾತನಾಡಿದ ವ್ಯಕ್ತಿ ಅಮಿತ್ ಅವರ ಬ್ಯಾಂಕ್ ಖಾತೆ ವಿವರ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಪಡೆದಿದ್ದು, ಆ ಮೂಲಕ ಅಮಿತ್ ಅಕೌಂಟ್ ನಿಂದ 1.99 ಲಕ್ಷ ರೂ. ಲಪಟಾಯಿಸಿದ್ದಾನೆ.
ಹಣ ಕಳೆದುಕೊಂಡ ಅಮಿತ್ ದೇವರಹಟ್ಟಿ ಈ ಸಂಬಂಧ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.