ವಿಜಯೇಂದ್ರ ಬಹಳ ದಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇರುವುದಿಲ್ಲ: ಎಂ.ಬಿ.ಪಾಟೀಲ್

Update: 2024-09-07 11:17 GMT

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬಹಳ ದಿನಗಳ ಕಾಲ ಆ ಸ್ಥಾನದಲ್ಲಿ ಇರುವುದಿಲ್ಲ. ಸ್ವಲ್ಪ ದಿನಗಳಲ್ಲೇ ಅವರನ್ನು ಕೆಳಗೆ ಇಳಿಸುತ್ತಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಭವಿಷ್ಯ ನುಡಿದಿದ್ದಾರೆ.

ಶನಿವಾರ ಇಲ್ಲಿನ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ತಮ್ಮ ತಂದೆಯನ್ನು ಭ್ರಷ್ಟಾಚಾರದಲ್ಲಿ ಸಿಲುಕಿಸಿದ್ದು ಹೇಗೆ?. ಏನೇನೋ‌ ಮಾಡಿ ಅವರ ರಾಜೀನಾಮೆ ಕೊಡಿಸಿದರಲ್ಲ. ಬಿಜೆಪಿಯವರೇ ಅವರನ್ನು ಕೆಳಗೆ ಇಳಿಸಿದ್ದು. ಮೊದಲು ವಿಜಯೇಂದ್ರ ಇದನ್ನು ತಿಳಿಯಲಿ ಎಂದು ಹೇಳಿದರು.

ಬಿಜೆಪಿಯವರು ಒಪ್ಪಿದ್ದರೇ?: ವಿಜಯೇಂದ್ರರನ್ನು ಬಿಜೆಪಿಯವರು ಒಪ್ಪಿದ್ದಾರಾ?. ಯತ್ನಾಳ್, ರಮೇಶ್ ಜಾರಕಿಹೊಳಿ, ಅಶ್ವತ್ ನಾರಾಯಣ, ಆರ್.ಅಶೋಕ್ ಸೇರಿದಂತೆ ಯಾರು ಕೂಡ ವಿಜಯೇಂದ್ರರನ್ನು ಒಪ್ಪಿಲ್ಲ ಎಂದು ಪಾಟೀಲ್ ಟೀಕಿಸಿದರು.‌

ಭಯಗೊಂಡಿಲ್ಲ: ಮುಡಾ ನಿವೇಶನ ಹಂಚಿಕೆಯಲ್ಲಿ ಮೂಲದಲ್ಲೇ ತಪ್ಪಿದೆ. ನಿವೇಶನ ಹಂಚಿಕೆ ಆಗಿದ್ದು, ಬಿಜೆಪಿ ಅವಧಿಯಲ್ಲಿ. ಇದರಲ್ಲಿ ಸಿದ್ದರಾಮಯ್ಯರ ಪಾಲು ಏನಿದೆ. ಮುಡಾದಿಂದ ಯಾರು ಭಯಗೊಂಡಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡ್ತಿದ್ದೇವೆ. ಇದರಲ್ಲಿ ನಮಗೆ‌ ಜಯ ಸಿಕ್ಕೇ ಸಿಗುತ್ತದೆ. ಹಗಲುಗನಸು ಬೇಡ‌.‌ ರಾಜ್ಯಪಾಲರ ನಡವಳಿಕೆ ಮಾತ್ರ ಕಾನೂನು ಬಾಹಿರ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News