ಸಿದ್ದರಾಮಯ್ಯಗೆ ʼಜಾತಿಗಣತಿʼ ವರದಿಯೇ ಮರಣ ಶಾಸನ : ವಿ.ಸೋಮಣ್ಣ

Update: 2025-04-13 19:22 IST
ಸಿದ್ದರಾಮಯ್ಯಗೆ ʼಜಾತಿಗಣತಿʼ ವರದಿಯೇ ಮರಣ ಶಾಸನ : ವಿ.ಸೋಮಣ್ಣ

ಸೋಮಣ್ಣ/ ಸಿದ್ದರಾಮಯ್ಯ

  • whatsapp icon

ಬೆಂಗಳೂರು : ಜಾತಿಗಣತಿ ವರದಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮರಣ ಶಾಸನ ಆಗಬಹುದು. ಏಕೆಂದರೆ ಅವರ ಪಕ್ಷದವರೇ ರಾಜಕೀಯವಾಗಿ ಕಾಲೆಳೆಯಲು ಪಿತೂರಿ ಮಾಡುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಜಾತಿಗಣತಿ ವರದಿ ವಿಚಾರವಾಗಿ ಮಾತನಾಡಿದ ಅವರು, ಜಾತಿಗಣತಿ ವರದಿಯು ಕಾಗಕ್ಕ ಗೂಬಕ್ಕ ಕತೆಯಂತೆ ಇದೆ. ಈ ವರದಿ ಸಿದ್ದರಾಮಯ್ಯ ಅವರಿಗೆ ಮರಣ ಶಾಸನ ಆಗಬಹುದು. ಅವರ ಪಕ್ಷದವರೇ ಅವರನ್ನು ರಾಜಕೀಯವಾಗಿ ಕಾಲೆಳೆಯಲು ಪಿತೂರಿ ಮಾಡುತ್ತಿದ್ದಾರೆ ಎಂದರು.

ಈ ವರದಿ ಜಾರಿಯಾದರೆ ಸಿದ್ದರಾಮಯ್ಯ ರಾಜ್ಯ ರಾಜಕೀಯ ಇತಿಹಾಸದಲ್ಲಿ ಒಬ್ಬ ಖಳನಾಯಕ ಆಗುತ್ತಾರೆ. ಸಿದ್ದರಾಮಯ್ಯ ಅವರಿಗೆ ಇದರ ಪೂರ್ಣ ಸತ್ಯ ಗೊತ್ತಿದೆ. ಆದರೆ ಅವರು ಕುರ್ಚಿ ಉಳಿಸಿಕೊಳ್ಳಲು ವರದಿ ಜಾರಿಗೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರ ಇವತ್ತಿನ ಪರಿಸ್ಥಿತಿ ನೋಡಿದರೆ ಈ ಮಟ್ಟಕ್ಕೂ ಅವರು ಬಂದಿದ್ದಾರಾ ಅನ್ನುವ ನೋವು ಕಾಡುತ್ತದೆ ಎಂದು ವಿ.ಸೋಮಣ್ಣ ಲೇವಡಿ ಮಾಡಿದರು.

ಜಾತಿಗಣತಿ ವರದಿ ಸರಿಯಾಗಿಲ್ಲ ಎಂದು ಕಾಂಗ್ರೆಸ್‍ನ ಶೇ.60ರಷ್ಟು ನಾಯಕರು ಹೇಳುತ್ತಿದ್ದಾರೆ. ಹಲವು ಕಡೆ ಸಮೀಕ್ಷೆ ಮಾಡಿಲ್ಲ, ಸರಕಾರಕ್ಕೆ ಹೊರೆಯಾದರೂ ಪರವಾಗಿಲ್ಲ ಮತ್ತೊಂದು ಸಮಿತಿ ಮಾಡಿ. ಈಗಿನ ವರದಿ ಜಾರಿಯಾದರೆ ರಾಜ್ಯದಲ್ಲಿ ಕೋಮುದಳ್ಳುರಿ ಆಗುತ್ತದೆ, ಅದಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಆಗುತ್ತಾರೆ ಎಂದು ವಿ.ಸೋಮಣ್ಣ ಎಚ್ಚರಿಕೆ ನೀಡಿದರು.

ವರದಿ ತಿರಸ್ಕರಿಸಲಿ: ಪ್ರಸ್ತುತ ತಂದಿರುವ ಜಾತಿ ಜನಗಣತಿ ವರದಿಯನ್ನು ಸಿದ್ದರಾಮಯ್ಯ ಅವರು ತಿರಸ್ಕರಿಸಬೇಕು. ಈ ಸರಕಾರಕ್ಕೆ ಮೂರು ವರ್ಷ ಸಮಯವಿದೆ, ಮತ್ತೊಂದು ಸಮೀಕ್ಷೆಯನ್ನು ಮಾಡಲಿ. ಈ ಸಮೀಕ್ಷೆ ವೈಜ್ಞಾನಿಕವಾಗಿ ಮಾಡಿಲ್ಲ, ವರದಿ ಪಾರದರ್ಶಕವಾಗಿಲ್ಲ ಎಂದು ವಿ.ಸೋಮಣ್ಣ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News