ಭವ್ಯ ಭಾರತದ ಕಲ್ಪನೆಯೊಂದಿಗೆ ನಾವು ಬದುಕಬೇಕು : ಗೃಹಸಚಿವ ಜಿ.ಪರಮೇಶ್ವರ್
Update: 2024-02-02 16:04 GMT
ಬೆಂಗಳೂರು: ಕಾಂಗ್ರೆಸ್ ಅಖಂಡ ಭಾರತಕ್ಕಾಗಿ ಸಾಕಷ್ಟು ತ್ಯಾಗ, ಬಲಿದಾನ, ಹೋರಾಟ ಮಾಡಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಭವ್ಯ ಭಾರತ ಕಲ್ಪನೆಯೊಂದಿಗೆ ನಾವು ಬದುಕಬೇಕು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಡಿ.ಕೆ.ಸುರೇಶ್ ಪ್ರತ್ಯೇಕ ರಾಷ್ಟ್ರದ ಬಗ್ಗೆ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ದೇಶದ ಐಕ್ಯತೆಗೆ ಮಹಾತ್ಮಗಾಂಧಿಯಿಂದ ಹಿಡಿದು ಸಾವಿರಾರು ಜನ ಹೋರಾಟ, ತ್ಯಾಗ, ಬಲಿದಾನ ಮಾಡಿದ್ದಾರೆ. ನಾವು ಒಗ್ಗೂಡಿಸುವ ಮಾತುಗಳನ್ನಾಡಬೇಕೇ ಹೊರತು, ಒಡೆದು ಆಳುವ ಮಾತುಗಳನ್ನಾಡಬಾರದು ಎಂದು ಹೇಳಿದರು.