ದುಬೈ: ಬುರ್ಜ್ ಖಲೀಫಾದಲ್ಲಿ ಭಾರತದ ತ್ರಿವರ್ಣ ಧ್ವಜದ ಚಿತ್ತಾರ

Update: 2023-08-15 17:56 GMT

ದುಬೈ: ವಿಶ್ವದ ಅತೀ ಎತ್ತರದ ಕಟ್ಟಡವೆಂಬ ಖ್ಯಾತಿ ಪಡೆದಿರುವ ದುಬೈಯ ಬುರ್ಜ್ ಖಲೀಫಾ ಕಟ್ಟಡದಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಗೀತೆ ಜನಮನಗಣದ ಹಿಮ್ಮೇಳದೊಂದಿಗೆ ತ್ರಿವರ್ಣ ಧ್ವಜದ ಚಿತ್ತಾರ ಬೆಳಗಿದೆ ಎಂದು ವರದಿಯಾಗಿದೆ.

‘ಬುರ್ಜ್ ಖಲೀಫಾದಲ್ಲಿ ಭಾರತದ ರಾಷ್ಟ್ರಗೀತೆಯೊಂದಿಗೆ ತ್ರಿವರ್ಣ ಧ್ವಜ. ರೋಮಾಂಚನಗೊಳಿಸುವ ಕ್ಷಣ..’ ಎಂದು ಟ್ವಿಟರ್ ಬಳಕೆದಾರರು ಈ ವೀಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ.

ಆಗಸ್ಟ್ 14ರಂದು ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಬುರ್ಜ್ ಖಲೀಫಾದ ಮೇಲೆ ತಮ್ಮ ದೇಶದ ಧ್ವಜದ ಚಿತ್ತಾರ ಮೂಡಿಲ್ಲ ಎಂದು ದುಬೈಯಲ್ಲಿ ನೂರಾರು ಪಾಕಿಸ್ತಾನೀಯರು ನಿರಾಶೆಯಿಂದ ಗದ್ದಲ ಸೃಷ್ಟಿಸಿದ್ದರು. ಆದರೆ ಬುರ್ಜ್ ಖಲೀಫಾದಲ್ಲಿ ಆಗಸ್ಟ್ 14ರಂದು ಪಾಕ್ ಧ್ವಜದ ಚಿತ್ತಾರ ಮೂಡಿರುವ ವೀಡಿಯೊವನ್ನು ಬುರ್ಜ್ ಖಲೀಫಾದ ಅಧಿಕೃತ ವೆಬ್ಸೈಟ್ನಲ್ಲಿ ಪ್ರಸಾರ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News