ಅನಂತಕುಮಾರ್ ಹೆಗಡೆಗೆ ಲೋಕಸಭಾ ಟಿಕೆಟ್ ಕೈತಪ್ಪಲು ಸಂವಿಧಾನ ಬದಲಾವಣೆ ಹೇಳಿಕೆಯೇ ಕಾರಣ : ವಿ.ಸೋಮಣ್ಣ

Update: 2024-03-25 20:18 IST
ಅನಂತಕುಮಾರ್ ಹೆಗಡೆಗೆ ಲೋಕಸಭಾ ಟಿಕೆಟ್ ಕೈತಪ್ಪಲು ಸಂವಿಧಾನ ಬದಲಾವಣೆ ಹೇಳಿಕೆಯೇ ಕಾರಣ : ವಿ.ಸೋಮಣ್ಣ
  • whatsapp icon

ತುಮಕೂರು : ಹಾಲಿ ಸಂಸದ ಆನಂತಕುಮಾರ್ ಹೆಗಡೆಗೆ ಈ ಬಾರಿಯ ಲೋಕಸಭಾ ಟಿಕೆಟ್ ಕೈತಪ್ಪಲು ಅವರು ಪದೇ ಪದೇ ನೀಡಿದ್ದ ಸಂವಿಧಾನ ಬದಲಾವಣೆ ಹೇಳಿಕೆಯೇ ಕಾರಣ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.

ತುರುವೇಕೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರು ಬಾರಿ ಸಂಸದರಾಗಿ ಆಯ್ಕೆಯಾದರೂ ಹಿಂದುತ್ವ, ಸಂವಿಧಾನ ಬದಲಾವಣೆಯಂತಹ ಮಾತುಗಳನ್ನು ಬಿಟ್ಟರೆ, ಕ್ಷೇತ್ರದ ಅಭಿವೃದ್ದಿ ಎಂಬುದು ಮರೀಚಿಕೆಯಾಗಿತ್ತು. ‌

ಸುಮಾರು 28 ವರ್ಷಗಳ ಕಾಲ ಉತ್ತರ ಕನ್ನಡ ಸಂಸದರಾಗಿದ್ದರೂ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ದಿ ಕಾರ್ಯಗಳು ಅವರ ಕೈಯಲ್ಲಿ ಆಗಿರಲಿಲ್ಲ. ಅಲ್ಲದೆ ಕಳೆದ 2019ರಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಒಂದು ರೀತಿಯಲ್ಲಿ ಜನರಿಂದ ದೂರವೇ ಉಳಿದಿದ್ದ ಅನಂತಕುಮಾರ ಹೆಗಡೆ, ಪಕ್ಷ ಸಂಘಟನೆಗೂ ತೊಡಗಿಸಿಕೊಂಡವರಲ್ಲ.ಅಲ್ಲದೆ ಪದೇ ಪದೇ ಸಂವಿಧಾನ ಬದಲಾವಣೆಯ ಮಾತುಗಳನ್ನಾಡಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತದ್ದ ಕಾರಣ, ಪಕ್ಷ ಮುಜುಗರ ಅನುಭವಿಸುವಂತಹ ಸ್ಥಿತಿ ಉಂಟಾಗಿತ್ತು. ಈ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಪಕ್ಷ ಅವರಿಗೆ ಟಿಕೆಟ್ ನಿರಾಕರಿಸಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News