ಪಾವಗಡ | ಜೂಜು ಅಡ್ಡೆ ಮೇಲೆ ಪೊಲೀಸ್‌ ದಾಳಿ : 9 ಮಂದಿಯ ಬಂಧನ, ನಗದು ಜಪ್ತಿ

Update: 2024-08-05 07:19 GMT

ಪಾವಗಡ : ಪಾವಗಡ ತಾಲೂಕಿನ ಕೊತ್ತೂರು ಸಮೀಪದ ಸಾಕಮ್ಮನಗುಡ್ಡದಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಯ ಮೇಲೆ ರವಿವಾರ ಮಧ್ಯರಾತ್ರಿ ಅರಸೀಕೆರೆ ಠಾಣೆಯ ಪೊಲೀಸರು ದಾಳಿ ನಡೆಸಿ 9 ಮಂದಿಯನ್ನು ಬಂಧಿಸಿದ್ದು, 2 ಲಕ್ಷದ 22 ಸಾವಿರ ರೂ. ನಗದು ಹಾಗೂ ನಾಲ್ಕು ಬೈಕ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.

ಖಚಿತ ಮಾಹಿತಿಯ ಮೇರೆಗೆ ಪಾವಗಡ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಗಿರೀಶ್ ಅವರ ನೇತೃತ್ವದಲ್ಲಿ ಪಿಎಸ್ಐ ತಾರಸಿಂಗ್ ಸಹಿತ ಇತರೆ ಸಿಬ್ಬಂದಿಗಳ ತಂಡ ದಾಳಿ ನಡೆಸಿದ್ದು, ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿ ಕ್ರಮಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News