ವೆಂಕಟರಾವ್ ಕಿದಿಯೂರರ 110ನೇ ಸಂಸ್ಮರಣೆ, ಸಹಾಯಧನ ವಿತರಣೆ

Update: 2024-09-17 15:48 GMT

ಉಡುಪಿ: ಉಡುಪಿಯ ಜನಪ್ರಿಯ ನ್ಯಾಯವಾದಿಯಾಗಿದ್ದ ಕಿದಿಯೂರು ವೆಂಕಟ್‌ರಾವ್ ಅವರ 110ನೇ ಸಂಸ್ಮರಣೆ ಹಾಗೂ ಅವರು ಸ್ಥಾಪಿಸಿದ್ದ ಕಿದಿಯೂರು ನಾಗಲಕ್ಷ್ಮೀ ಶ್ರೀನಿವಾಸ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯಧನ ವಿತರಣೆ ಇತೀಚೆಗೆ ಇಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ಗಳನ್ನು ವಿತರಿಸಿ ಮಾತನಾಡಿದ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್, ವೈದ್ಯರಾಗಿದ್ದ ತಾವು ಎಲ್‌ಎಲ್‌ಬಿ ಕಲಿಯಲು ವೆಂಕಟರಾವ್ ಅವರ ಪ್ರೇರಣೆಯೇ ಕಾರಣ ಎಂದರು.

ಟ್ರಸ್ಟಿನ ಅಧ್ಯಕ್ಷರಾದ ಮಂಗಳೂರಿನ ಹಿರಿಯ ನ್ಯಾಯವಾದಿ ಪಿ. ರಂಜನ್ ರಾವ್ ಮಾತನಾಡಿ, ತನ್ನ ಗೆಲುವಿನೊಂದಿಗೆ ಇತರರನ್ನು ಗೆಲುವಿನಡೆ ಕೊಂಡೊಯ್ಯುವುದು ವೆಂಕಟರಾವ್ ಅವರ ಗುಣವಾಗಿತ್ತು. ಶಿಸ್ತುಬದ್ಧ ಜೀವನದೊಂದಿಗೆ ಬಡ ಜನತೆಗೆ ಸಹಾಯ ಮಾಡುವುದಕ್ಕಾಗಿ ತನ್ನ ಸರ್ವಸ್ವ ವನ್ನು ಅವರು ಟ್ರಸ್ಟಿಗೆ ಹಸ್ತಾಂತರಿಸಿದರು. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅವರ ನೆನಪಿನಲ್ಲಿ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಬಡಜನರ ವೈದ್ಯಕೀಯ ಶುಶ್ರೂಷೆಗಳಿಗಾಗಿ ಸುಮಾರು 5 ಲಕ್ಷ ರೂ.ಗಳ ಆರ್ಥಿಕ ಸಹಾಯವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ಕೆ.ನಾಗೇಶ್ ಭಟ್, ಕಾರ್ಯದರ್ಶಿ ಕೆ.ಗುರುರಾಜ್ ರಾವ್, ಬಿ.ಜಿ.ರಾವ್ ಅಂಬಲ ಪಾಡಿ, ಪ್ರೊ. ಶ್ರೀಶ ಆಚಾರ್ಯ, ಕೆ .ನಾಗರಾಜ್ ರಾವ್, ಜಯಶ್ರೀ ಆರ್. ಭಟ್ ಉಪಸ್ಥಿತರಿದ್ದರು.

ಟ್ರಸ್ಟ್‌ನ ಕೋಶಾಧಿಕಾರಿ ಕೆ.ಕೃಷ್ಣಮೂರ್ತಿ ರಾವ್ ಸ್ವಾಗತಿಸಿದರು. ಟ್ರಸ್ಟಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳ ನ್ನಾಡಿದರು. ರಾಮಚಂದ್ರ ಉಪಾಧ್ಯಾಯ ಟ್ರಸ್ಟಿನ ಕಾರ್ಯ ಚಟುವಟಿಗಳನ್ನು ವಿವರಿಸಿದರು. ಕೆ. ಘುಪತಿ ರಾವ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News