ಯುವಕ ಆತ್ಮಹತ್ಯೆ
Update: 2024-09-18 15:14 GMT
ಬೈಂದೂರು, ಸೆ.18: ವಿಪರೀತ ಮದ್ಯ ಸೇವನೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಶಿರೂರು ಗ್ರಾಮದ ರಾಮ ಎಂಬವರ ಮಗ ಮಣಿಕಂಠ(28) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.17ರಂದು ಮಧ್ಯಾಹ್ನ ಶಿರೂರು ಗ್ರಾಮದ ಹಣಬರಕೇರಿ ಎಂಬಲ್ಲಿನ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.