ಮೇ 17ರಿಂದ ಪ್ರಾಚೀನ ಕಲ್ಲಚ್ಚು ಕಲಾಕೃತಿಗಳ ಪ್ರದರ್ಶನ

Update: 2024-05-15 15:36 GMT

ಉಡುಪಿ, ಮೇ 15: 1890-1947ರ ಅವಧಿಯ ಭಿತ್ತಿಪತ್ರ, ಬಟ್ಟೆ ಲೇಬಲ್, ಬೆಂಕಿ ಪೊಟ್ಟಣದ ಮೇಲಿನ ಲೇಬಲ್‌ಗಳ ಕಲ್ಲಚ್ಚು ಕಲಾ ಪ್ರದರ್ಶನ ವನ್ನು ಕುಂಜಿಬೆಟ್ಟುವಿನ ಅದಿತಿ ಕಲಾ ಗ್ಯಾಲರಿಯಲ್ಲಿ ಮೇ 17ರಿಂದ 19ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಅದಿತಿ ಆರ್ಟ್ ಗ್ಯಾಲರಿಯ ಆಡಳಿತ ವಿಶ್ವಸ್ಥ ಡಾ. ಕಿರಣ್ ಆಚಾರ್ಯ ತಿಳಿಸಿದ್ದಾರೆ.

ಗ್ಯಾಲರಿಯಲ್ಲಿಂದು ಕರೆದ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೂಲ ಪ್ರತಿಗಳನ್ನು ಬಹು ಪ್ರತಿಗಳನ್ನಾಗಿ ಮಾಡುವ ಸಂಪ್ರದಾಯ ಬದ್ಧ ಕಲೆಯೇ ಕಲ್ಲಚ್ಚು. ಇದೊಂದು ಪುರಾತನ ಮುದ್ರಣ ತಂತ್ರಗಾರಿಕೆ. ಕಲ್ಲಿನ ಮೇಲೆ ಚಿತ್ರಿಸಿ ಅದನ್ನು ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸಿ ಅದರ ಮೂಲಕ ಚಿತ್ರ ಪ್ರತಿಗಳನ್ನು ತೆಗೆಯುವ ಕಲೆ. ಪುರಾತನ ಕಲ್ಲಚ್ಚು ಕಲಾಕೃತಿಗಳ ಸಂರಕ್ಷಣೆ, ಅಧ್ಯಯನ ಮತ್ತು ಸಾಮಾಜಿಕ ಬದಲಾವಣೆಗಳ ದಾಖಲೀಕರಣ ಈ ಪ್ರದರ್ಶನದ ಉದ್ದೇಶ ವಾಗಿದೆ ಎಂದರು.

ಮೇ 17ರಂದು ಬೆಳಗ್ಗೆ 10.30ಕ್ಕೆ ಮುದ್ರಣ ಕ್ಷೇತ್ರದ ಉದ್ಯಮಿ ಮಂಗಳೂರಿನ ನೇಮಿರಾಜ್ ಶೆಟ್ಟಿ ಕಲಾ ಪ್ರದರ್ಶನವನ್ನು ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಕಲಾವಿದ ಡಾ.ಜನಾರ್ದನ ಹಾವಂಜೆ ಭಾಗವಹಿಸಲಿರುವರು. ಬೆಳಗ್ಗೆ 11ರಿಂದ ಸಂಜೆ 7ರವರೆಗೆ ಕಲಾಕೃತಿಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ಯಾಲರಿಯ ವಿಶ್ವಸ್ಥರಾದ ಶ್ರೀನಿವಾಸ, ಪ್ರವೀಣಾ ಮೋಹನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News