ಮಣಿಪಾಲ: ಅ.24ರಂದು ಡಾ.ರಮಾ ಬೆನ್ನೂರು ವಿಶೇಷ ಉಪನ್ಯಾಸ

Update: 2024-10-23 14:14 GMT

ಉಡುಪಿ: ಮೈಸೂರಿನ ಸಂಗೀತ ವಿದುಷಿ-ಲೇಖಕಿ ಡಾ.ರಮಾ ಬೆನ್ನೂರು ಅವರು ಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ಅ.24ರಂದು ಬೆಳಗ್ಗೆ 11:15ಕ್ಕೆ ‘ಕಲೆಯ ಉದ್ದೇಶ: ಭಾರತೀಯ ದೃಷ್ಟಿಕೋನ’ ಎಂಬ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಮಣಿಪಾಲದ ಹೊಟೇಲ್ ಫಾರ್ಚೂನ್ ಇನ್ ವ್ಯಾಲಿವ್ಯೆನ ಪಕ್ಕದಲ್ಲಿರುವ ಜಿಸಿಪಿಎಎಸ್‌ನ ಹೊಸ ಕಟ್ಟಡದ 2ನೇ ಮಹಡಿಯಲ್ಲಿರುವ ಸರ್ವೋದಯ ಸಭಾಂಗಣದಲ್ಲಿ ಉಪನ್ಯಾಸ ನಡೆಯಲಿದೆ.

ಮೈಸೂರಿನಲ್ಲಿ ಕನ್ನಡ ಸಾಹಿತ್ಯದ ಪ್ರಾಧ್ಯಾಪಕರೂ ಆಗಿರುವ ಡಾ ರಮಾ ಬೆನ್ನೂರು, ತನ್ನ ಮುತ್ತಜ್ಜ ವೀಣೆ ಶೇಷಣ್ಣನವರ ಪರಂಪರೆಯನ್ನು ಮುಂದು ವರಿಸಿದ್ದು, ವಿವಿಧ ಪ್ರಕಟಣೆಗಳಿಗೆ ತನ್ನ ಲೇಖನಗಳ ಮೂಲಕ ಕಲಾ ಪ್ರಪಂಚಕ್ಕೆ ವ್ಯಾಪಕ ಕೊಡುಗೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News