ಅ.13ರಂದು ಡಿಕೆಎಸ್ಸಿ ಸಂಸ್ಥಾಪನಾ ದಿನ: ಮೂಳೂರು ಮರ್ಕಝ್‌ನಲ್ಲಿ ವಿವಿಧ ಕಾರ್ಯಕ್ರಮ

Update: 2024-10-12 17:04 GMT

ಕಾಪು: ಅ.13ರಂದು ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಇದರ ಸಂಸ್ಥಾಪನಾ ದಿನವಾಗಿದ್ದು ಆ ಪ್ರಯುಕ್ತ ಸಂಘಟನೆಯ ಅಧೀನ ಸಂಸ್ಥೆಯಾದ ಮೂಳೂರು ಮರ್ಕಝ್ ಕ್ಯಾಂಪಸ್ಸಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ 9ಕ್ಕೆ ಮರ್ಕಝ್ ಕ್ಯಾಂಪಸ್‌ ನಲ್ಲಿ ಸಂಸ್ಥೆಯ ಗೌರವಾನ್ವಿತ ಅಧ್ಯಕ್ಷರಾದ ಬಹು ಅಸ್ಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಳ್ ರವರು ಧ್ವಜಾರೋಹಣ ನೇರವೇರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು ಳುಹರ್ ನಮಾಜಿನ ನಂತರ ಅಸ್ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ರವರ ನೇತೃತ್ವದಲ್ಲಿ ಸಂಸ್ಥೆಗಾಗಿ ದುಡಿದು ನಿಧನರಾದ ಡಿಕೆಎಸ್ಸಿಯ ಕಾರ್ಯಕರ್ತರು, ನಾಯಕರು, ಹಿತೈಷಿಗಳು ಹಾಗೂ ದಾನಿಗಳ ಅನುಸ್ಮರಣೆ ಮತ್ತು ಅವರ ಮಗ್ಫಿರತ್ತ್ ಮರ್ಹಮತ್ತ್ ಗೆ ಬೇಕಾಗಿ ಪ್ರತ್ಯೇಕ ಕುರ್ ಆನ್ ಪಾರಾಯಣ ಮಾಡಿ ತಹ್ಲೀಲ್ ಹೇಳಿ ಹದ್ಯಾ ಮಾಡಿ ದುಆ ಮಾಡುವ ವಿಶೇಷ ದುಆ ಮಜ್ಲಿಸ್ ನಡೆಯಲಿದೆ.

ಸಂಜೆ 4 ಗಂಟೆಗೆ ಉಚ್ಚಿಲ ಭಾಸ್ಕರ್ ನಗರದ ಮಸೀದಿಯಲ್ಲಿ ಅಸರ್ ನಮಾಝ್ ನಂತರ ಅಲ್ಲಿಂದ ಮೂಳೂರಿನ ಸಂಸ್ಥೆಯ ವರೆಗೆ ಡಿಕೆಎಸ್ಸಿ ರ್ಯಾಲಿ ನಡೆಯಲಿದ್ದು ಸಂಜೆ 5 ಗಂಟೆಗೆ ಮರ್ಕಝ್ ಕ್ಯಾಂಪಸ್‌ ನಲ್ಲಿ ನಡೆಯುವ ದಫ್ಫ್ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಹಲವಾರು ಧಾರ್ಮಿಕ, ಸಾಮಾಜಿಕ ನೇತಾರರು ಭಾಗವಹಿಸಲಿದ್ದು ಮಗ್ರಿಬ್ ನಮಾಝ್ ನಂತರ ಆಹ್ವಾನಿತ ತಂಡಗಳ ದಫ್ಫ್ ಸ್ಪರ್ಧೆ ನಡೆಯಲಿದೆ‌ ಎಂದು ಸಂಸ್ಥೆಯ ಜನರಲ್ ಮ್ಯಾನೇಜರ್ ಯು ಕೆ ಮುಸ್ತಫಾ ಸಅದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News