ಮಲ್ಪೆ ಬಾಪುತೋಟದ ವ್ಯಕ್ತಿ ನಾಪತ್ತೆ

Update: 2024-10-12 13:50 GMT

ಉಡುಪಿ, ಅ.12: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಬೋಟುಗಳ ಎಲೆಕ್ಟ್ರೀಶಿಯನ್ ಕಾಯಕವನ್ನು ಮಾಡುತ್ತಿದ್ದ ಮಲ್ಪೆ ಬಾಪುತೋಟದ ನಿವಾಸಿ ಜಲೀಲ್ (49) ಎಂಬವರು ಬೆಳಿಗ್ಗೆ 5 ಗಂಟೆಯಿಂದ ನಾಪತ್ತೆಯಾಗಿದ್ದು, ಅವರ ಬೈಕ್ ಮಲ್ಪೆ ಪಡುಕರೆ ಸೇತುವೆ ಬಳಿ ಪತ್ತೆಯಾಗಿದೆ.

ಇವರನ್ನು ಯಾರಾದರೂ ಕಂಡಲ್ಲಿ ಅಥವಾ ಅಪರಿಚಿತ ಮೃತದೇಹ ಎಲ್ಲಾದರೂ ಪತ್ತೆಯಾದಲ್ಲಿ ತಕ್ಷಣ ಆಪತ್ಭಾಂಧವ ಈಶ್ವರ್ ಮಲ್ಪೆ (ಮೊಬೈಲ್: 9663434415) ಅಥವಾ ಸ್ಥಳೀಯ ಮಲ್ಪೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಆಪತ್ಭಾಂಧವ ಈಶ್ವರ್ ಮಲ್ಪೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News