ಗಂಗೊಳ್ಳಿ| ಕೋಳಿಅಂಕಕ್ಕೆ ಪೊಲೀಸರ ದಾಳಿ: ನಾಲ್ವರ ಬಂಧನ
Update: 2025-01-05 17:29 GMT
ಗಂಗೊಳ್ಳಿ: ಆಲೂರು ಪೇಟೆ ನಂದಿಕೇಶ್ವರ ವೈನ್‌ಶಾಪ್ ಬಳಿ ಜ.4ರಂದು ಮಧ್ಯಾಹ್ನ ವೇಳೆ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ನಾಲ್ವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆಲೂರು ಗ್ರಾಮದ ವೆಂಕಟೇಶ(42), ಮಹೇಶ(29), ಹೊಸಂಗಡಿ ಗ್ರಾಮದ ಅಖಿಲೇಶ(27), ನಾರ್ಕಳಿ ಹರ್ಕೂರು ಗ್ರಾಮದ ಚಿಕ್ಕಯ್ಯ(65) ಬಂಧಿತರು.
ಬಂಧಿತರಿಂದ ಐದು ಕೋಳಿ, 21ಕೋಳಿಬಾಳು ಹಾಗೂ 6820ರೂ. ನಗದು, ಮತ್ತು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 39,320ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.