ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಂಕ್ರೀಟ್ ರಸ್ತೆಗೂ ದಾರಿದೀಪ ಅಳವಡಿಸಲು ಮನವಿ

Update: 2023-10-26 11:57 GMT

ಉಡುಪಿ, ಅ.26: ಪರ್ಕಳದ ಕೆನರಾ ಬ್ಯಾಂಕ್‌ನಿಂದ ದೇವಿನಗರದಲ್ಲಿರುವ ಪೆಟ್ರೊಲ್ ಪಂಪ್ ವರೆಗಿನ ಕಾಂಕ್ರೀಟ್ ರಸ್ತೆಗೆ ದಾರಿ ದೀಪ ಅಳವಡಿಸುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತರ ನಿಯೋಗವು ಬುಧವಾರ ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಈಗಾಗಲೇ ನಗರಸಭೆಯಿಂದ 176 ದಾರಿದೀಪಗಳನ್ನು ಕಡಿಯಾಳಿಯಿಂದ ಮಣಿಪಾಲದ ಎಂಐಟಿ ತನಕ ಮಾತ್ರ ಹಾಕಲಾ ಗಿದೆ. ನಗರಸಭೆ ವ್ಯಾಪ್ತಿಯೊಳಗೆ ಬರುವ ಪರ್ಕಳದವರೆಗೆ ದಾರಿದೀಪವನ್ನು ಅಳವಡಿಸಿಲ್ಲ. ಇಲ್ಲಿ ದಾರಿದೀಪ ಇಲ್ಲದೆ ವಾಹನ ಸವಾರರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪ್ರಾಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚಾಗಿವೆ.

ರಾತ್ರಿಹೊತ್ತು ಕಪ್ಪುಬಣ್ಣದ ದನಕರುಗಳು ರಸ್ತೆಯಲ್ಲಿಯೇ ಮಲಗಿರುತ್ತದೆ. ಇದು ವಾಹನ ಸವಾರರಿಗೆ ತೋಚದೆ ಸಾಕಷ್ಟಡು ಅಪಘಾತಗಳು ಸಂಭುವಿಸಿವೆ. ಆದುದರಿಂದ ನಗರಸಭೆಯು ತಕ್ಷಣ ದಾರಿದೀಪ ಅಳವಡಿಕೆ ಕಾರ್ಯವನ್ನು ಪರ್ಕಳಕ್ಕೂ ವಿಸ್ತರಣೆ ಮಾಡಬೇಕು ಎಂದು ನಿಯೋಗ ಆಗ್ರಹಿಸಿದೆ.

ಮನವಿಯನ್ನು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ಸ್ವೀಕರಿಸಿ ದರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯ ಕರ್ತರಾದ ಗಣೇಶ್‌ರಾಜ್ ಸರಳಬೆಟ್ಟು, ಜಯಶೆಟ್ಟಿ ಬನ್ನಂಜೆ, ರವಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News