ಉಡುಪಿಯ ಪ್ರಗತಿಗೆ ಇಂಜಿನಿಯರ್‌ಗಳ ಕೊಡುಗೆ ಅಪಾರ: ಎಸ್‌ಎಸ್ ನಾಯಕ್

ಉಡುಪಿ: ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಮತ್ತು ಅರ್ಕಿಟೆಕ್ಟ್ ಉಡುಪಿ ವತಿಯಿಂದ ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ ಮೀಟ್ ಗ್ರೀಟ್ ಕಾರ್ಯಕ್ರಮ ಬುಧವಾರ ಕಡಿಯಾಳಿ ಹೊಟೇಲ್ ಓಷಿಯನ್ ಪರ್ಲ್ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರಿನ ಎಸ್‌ಎಸ್ ನಾಯಕ್ ಅಸೋಸಿಯೇಟ್ಸ್‌ನ ಮುಖ್ಯಸ್ಥ ಸಿಎ ಎಸ್.ಎಸ್.ನಾಯಕ್ ಮಾತನಾಡಿ, ಉಡುಪಿ ಪ್ರಗತಿ ಹೊಂದಲು ಇಂಜಿನಿಯರ್ಸ್‌ಗಳ ಕೊಡುಗೆ ಅಪಾರವಾದದ್ದು. ಯುವ ಇಂಜಿನಿಯರ್ ದೊಡ್ಡ ನಗರಕ್ಕೆ, ವಿದೇಶಕ್ಕೆ ವಲಸೆ ಹೋಗುವುದನ್ನು ನಿಲ್ಲಿಸಿ, ತಮ್ಮ ಊರಿನ ನಿರ್ಮಾಣ ಕ್ಷೇತ್ರಕ್ಕೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಉಡುಪಿ ಎಸಿಸಿಇಎ ಗೌರವಾಧ್ಯಕ್ಷ ನಾಗೇಶ್ ಹೆಗ್ಡೆ, ವಿಜೇಯ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ಪಾಂಡುರಂಗ ಆಚಾರ್ಯ, ಮಾಜಿ ಅಧ್ಯಕ್ಷ ಗೋಪಾಲ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಅಧ್ಯಕ್ಷ ಆರ್.ಯೋಗೀಶ್ ಚಂದ್ರಾ ಧಾರ ಸ್ವಾಗತಿಸಿದರು. ಖಚಾಂಚಿ ಅಮಿತ್ ಅರವಿಂದ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮಹೇಶ್ ಕಾಮತ್ ವಂದಿಸಿದರು. ಬಳಿಕ ಸಂಸ್ಥೆಯ ಸದ್ಯಸರಿಂದ ಮನೋ ರಂಜನೆ ಕಾರ್ಯಕ್ರಮ ಜರಗಿತು.