ಗಂಗೊಳ್ಳಿ| ಬೆದರಿಕೆ ಕರೆ: ಮತ್ತೊಂದು ಪ್ರಕರಣ ದಾಖಲು

Update: 2024-11-04 16:43 GMT

ಗಂಗೊಳ್ಳಿ, ನ.4: ಇತ್ತೀಚೆಗೆ ಕೆಲವು ದಿನಗಳ ಹಿಂದೆ ಬೈಂದೂರು ಅರವಿಂದ ಪೂಜಾರಿ ಮತ್ತವರ ಸ್ನೇಹಿತರಿಗೆ ಪಿಸ್ತೂಲ್ ಹಿಡಿದು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ಅವರಿಗೆ ಬಂದ ಬೆದರಿಕೆ ಕರೆ ಹಿನ್ನೆಲೆ ಮತ್ತೊಂದು ಪ್ರಕರಣ ಠಾಣೆಯಲ್ಲಿ ದಾಖಲಾಗಿದೆ.

ಅ.18ರಂದು ಅರವಿಂದ ಹಾಗೂ ಇತರ ಸ್ನೇಹಿತರಿಗೆ ಸಚಿನ್ ಹಾಗೂ ಇತರ ಇಪ್ಪತ್ತು ಜನರ ತಂಡ ಮಾರಕಾಯಧ ಹಾಗೂ ಪಿಸ್ತೂಲ್ ಹಿಡಿದು ಕೊಲೆ ಯತ್ನ ನಡೆಸಿದ ಬಗ್ಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು ಇತ್ತೀಚೆಗೆ ಹಲವರ ಬಂಧನವೂ ಆಗಿತ್ತು. ಈತನ್ಮದ್ಯೆ ಅ.24 ರಂದು ರಾತ್ರಿ ಅರವಿಂದ ಮನೆಯ ಬಳಿ ವಾಕಿಂಗ್ ಮಾಡುತ್ತಿರುವಾಗ ಅವರ ಮೊಬೈಲ್‌ಗೆ ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ ನೀವು ಮೊನ್ನೆ ನೀಡಿದ ದೂರು ವಾಪಾಸ್ಸು ತಗೆದುಕೊಳ್ಳಬೇಕು ಇಲ್ಲದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಕರೆ ಮಾಡಿದ್ದರು.

ಈ ಬಗ್ಗೆ ಅರವಿಂದ್ ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅಸಂಜ್ಞೆಯ ಪ್ರಕರಣ (ಎನ್.ಸಿ) ದಾಖಲಿಸಿಕೊಂಡು ನ್ಯಾಯಾಲಯದ ಅನುಮತಿ ಪಡೆದ ಪೊಲೀಸರು ಇದೀಗ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News