ಹೆಜಮಾಡಿ ಬಂದರು ಕಾಮಗಾರಿಯ ಸೊತ್ತು ಕಳವು

Update: 2023-09-27 13:39 GMT

ಪಡುಬಿದ್ರಿ, ಸೆ.27: ಹೆಜಮಾಡಿ ಕೋಡಿಯಲ್ಲಿ ನಡೆಯುತ್ತಿರುವ ಹೊಸ ಬಂದರಿನ ಕಾಮಗಾರಿಗೆ ಸಂಬಂಧಿಸಿದ ಲಕ್ಷಾಂತರ ರೂ. ಮೌಲ್ಯದ ಸೊತ್ತಗಳು ಕಳವಾಗಿರುವ ಬಗ್ಗೆ ವರದಿಯಾಗಿದೆ.

ತಮಿಳುನಾಡಿವ ಶ್ರೀಪತಿ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಮಾ.23ರಿಂದ ಬಂದರು ಕಾಮಗಾರಿ ನಡೆಸು ತ್ತಿದ್ದು, ಬಂದರಿನ ಕಾಮಗಾರಿ ಕೆಲಸಕ್ಕಾಗಿ ಬಳಸಿ ಉಳಿದ ಸೊತ್ತುಗಳನ್ನು ಅಲ್ಲೇ ಇಡಲಾಗಿತ್ತು. ಇವುಗಳನ್ನು ಆ.24ರಿಂದ ಸೆ.25ರ ಮಧ್ಯಾವಧಿಯಲ್ಲಿ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಕಳುವಾದ ಸೊತ್ತುಗಳ ಒಟ್ಟು ಮೌಲ್ಯ 18,00,078ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News