ಮನೆಗೆ ನುಗ್ಗಿ ಕಳವು ಪ್ರಕರಣ: ಆರೋಪಿಗಳಿಗೆ ಜೈಲು ಶಿಕ್ಷೆ, ದಂಡ

Update: 2023-09-24 15:35 GMT

ಉಡುಪಿ, ಸೆ.23: ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ 2 ತಿಂಗಳ ಶಿಕ್ಷೆ ಹಾಗೂ 40 ಸಾವಿರ ರೂ.ದಂಡ ವಿಧಿಸಿ ಉಡುಪಿಯ ಹೆಚ್ಚುವರಿ ಸಿ.ಜೆ.ಮತ್ತು ಎ.ಸಿ.ಜೆ.ಎಂ.ನ್ಯಾಯಾಲಯ ಆದೇಶ ನೀಡಿದೆ.

ಅಬ್ದುಲ್ ಖಾದರ್ ಹಾಗೂ ಅಜೀಜ್ ಶಿಕ್ಷೆಗೆ ಗುರಿಯಾದ ಆರೋಪಿಗಳು. ಇವರು 2015ರ ಡಿ.26ರಂದು ರಾತ್ರಿ ವೇಳೆ ಎಲ್ಲೂರು ಗ್ರಾಮದ ಅದಮಾರು ಎಂಬಲ್ಲಿರುವ ಪಿ.ಜನಾರ್ದನ ರಾವ್ ಅವರ ಮನೆಗೆ ಕಿಟಕಿಯ ಮೂಲಕ ಒಳಗೆ ಪ್ರವೇಶಿಸಿ ಮನೆಯ ಬೆಡ್‌ರೂಂನ ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಪಿ.ಆರ್.ಯೋಗೇಶ್ ಆರೋಪಿಗಳ ವಿರುದ್ಧದ ಪ್ರಕರಣ ಸಾಬೀತಾಗಿದೆ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದ್ದಾರೆ. ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಬದರೀನಾಥ್ ನಾಯರಿ ವಾದ ಮಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News