‘ಯಕ್ಷ ಪಂಚಮಿ’ ಕಾರ್ಯಕ್ರಮ ಉದ್ಘಾಟನೆ

Update: 2023-09-26 13:07 GMT

ಉಡುಪಿ, ಸೆ.26: ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಕೃಷ್ಣಾಪುರ ಮಠದ ಆಶ್ರಯದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ, ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲೆ ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇವರ ಸಹಕಾರದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಐದು ದಿನಗಳ ಕಾಲ ಹಮ್ಮಿಕೊಳ್ಳಲಾದ 4ನೇ ವರ್ಷದ ‘ಯಕ್ಷ ಪಂಚಮಿ’ ಕಾರ್ಯ ಕ್ರಮವನ್ನು ಪರ್ಯಾಯ ಕೃಷ್ಣಾಪುರ ಮಠದ ದಿವಾನ ವರದರಾಜ ಭಟ್ ಸೋಮವಾರ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರವರ್ತ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಯಕ್ಷಗಾನದಂತಹ ಕಲೆಯನ್ನು ಉಳಿಸಿ ಬೆಳೆಸಬೇಕು ಎನ್ನುವ ಏಕೈಕ ಉದ್ದೇಶದಿಂದ ಯಕ್ಷ ಪಂಚಮಿ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಯಕ್ಷಗಾನ ಕಲೆಯ ಬೆಳವಣಿಗೆಗೆ ಕಲಾ ರಾಧಕರು ಹೆಚ್ಚಿನ ಸಂಖ್ಯೆಯಲ್ಲಿ ಈ ರಂಗಕ್ಕೆ ಬರಬೇಕು. ಕಲೆಯ ಉಳಿವಿಗೆ ಹೇಗೆ ಕಲಾವಿದ, ಪ್ರೇಕ್ಷಕನೂ ಕಾರಣನಾಗುತ್ತಾನೋ ಹಾಗೆಯೇ ಕಲಾರಾಧಕರ ಕೊಡುಗೆ ಕೂಡಾ ಅಷ್ಟೇ ಅಗತ್ಯವಿದೆ ಎಂದರು.

ಶ್ರೀಕ್ಷೇತ್ರ ಮೆಕ್ಕೆಕಟ್ಟು ಆಡಳಿತ ಮೊಕ್ತೇಸರ ಕಿಶನ್ ಹೆಗ್ಡೆ ಕೊಳ್ಕೆಬೈಲು, ರಂಗಸ್ಥಳ ಮಂಗಳೂರು ಅಧ್ಯಕ್ಷ ದಿನೇಶ್ ವಿ.ಪೈ, ಹಟ್ಟಿಯಂಗಡಿ ಮೇಳದ ಸಂಚಾಲಕ ವಕ್ವಾಡಿ ರಂಜಿತ್ ಶೆಟ್ಟಿ, ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News