ಶಿಕ್ಷಕ ವೃಂದಕ್ಕೆ ಮಾಡಿದ ಅವಮಾನ: ಸಂಸದ ಕೋಟ ಆರೋಪ

Update: 2024-09-05 13:47 GMT

ಉಡುಪಿ, ಸೆ.5: ರಾಜ್ಯದ ಅತ್ಯುತ್ತಮ ಪ್ರಾಚಾರ್ಯ ಪ್ರಶಸ್ತಿಗೆ ಆಯ್ಕೆ ಮಾಡಿ ಕೊನೆಯ ಕ್ಷಣದಲ್ಲಿ ತಡೆ ಹಿಡಿದ ರಾಜ್ಯ ಸರಕಾರದ ಕ್ರಮ ಶಿಕ್ಷಕ ವೃಂದಕ್ಕೆ ಮಾಡಿದ ಅವಮಾನ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಂಶುಪಾಲರೊಬ್ಬರ ಪ್ರಶಸ್ತಿ ವಾಪಾಸು ಪಡೆದಿರು ವುದು ನೋವಿನ ಸಂಗತಿ,. ಸರಕಾರದ ಈ ಆಶ್ಚರ್ಯವನ್ನುಂಟು ಮಾಡಿದೆ. ಏಕೆಂದರೆ ಅವರು ರಾಜ್ಯ ಸರಕಾರದ ಆದೇಶ ವನ್ನು ಪಾಲಿಸಿದ್ದರು. ಸಮಾನ ವಸ್ತ್ರ ಸಂಹಿತೆ ಇರಬೇಕೆಂದು ಹಿಜಾಬ್‌ನ್ನು ನಿಷೇಧಿಸಲಾಗಿತ್ತು ಎಂದವರು ಹೇಳಿದರು.

ಒಬ್ಬ ಸರಕಾರಿ ಅಧಿಕಾರಿಯಾಗಿ ಅವರು ಸರಕಾರದ ಆದೇಶವನ್ನು ಪಾಲಿಸಿದ್ದರು. ಹೈಕೋರ್ಟ್ ಸಹ ಇದಕ್ಕೆ ಪೂರಕವಾದ ಆದೇಶ ನೀಡಿತ್ತು. ಸರಕಾರ ಹೈಕೋರ್ಟ್‌ನ ಆದೇಶವನ್ನು ಗೌರವಿಸುವುದೋ ಅಥವಾ ತನ್ನ ಅಜೆಂಡಾವನ್ನೋ ಎಂಬು ದನ್ನು ಸ್ಪಷ್ಟಪಡಿಸಬೇಕು ಎಂದು ಸಂಸದ ಕೋಟ ಒತ್ತಾಯಿಸಿದರು.

ಇದು ಶಿಕ್ಷಕ ವೃಂದಕ್ಕೆ ಮಾಡಿದ ಅವಮಾನ. ಮುಖ್ಯಮಂತ್ರಿಗಳು ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಶಿಕ್ಷಕರಿಗೆ ಪ್ರಶಸ್ತಿ ಯನ್ನು ಮತ್ತೆ ಘೋಷಣೆ ಮಾಡಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.

ಉಡುಪಿ ಜಿಲ್ಲೆಗೆ ಮಾಡಿದ ಅವಮಾನ: ಯಶಪಾಲ್ ಸುವರ್ಣ

ರಾಜ್ಯ ಶಿಕ್ಷಣ ಇಲಾಖೆಯ ವತಿಯಿಂದ ಅತ್ಯುತ್ತಮ ಪ್ರಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಜಿ. ರಾಮಕೃಷ್ಣ ಅವರಿಗೆ ಘೋಷಿಸಿದ ಪ್ರಶಸ್ತಿಯನ್ನು ಮತೀಯ ಶಕ್ತಿಗಳ ಓಲೈಕೆ ಗಾಗಿ ಹಿಂಪಡೆಯುವ ಮೂಲಕ ರಾಜ್ಯ ಸರಕಾರ ಸಮಸ್ತ ಶಿಕ್ಷಕ ವೃಂದಕ್ಕೆ ಅಪಮಾನ ಮಾಡಿದೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಶಿಕ್ಷಕರ ಆಯ್ಕೆ ಸಮಿತಿ ಶಿಕ್ಷಕರ ಸಾಧನೆ, ಅರ್ಹತೆಯನ್ನು ಪರಾಮರ್ಶಿಸಿ ಶ್ರೇಷ್ಠ ಶಿಕ್ಷಕರಿಗೆ ನೀಡುವ ಪ್ರಶಸ್ತಿಯ ಘನತೆಗೆ ರಾಜ್ಯ ಸರಕಾರ ಧಕ್ಕೆ ತಂದಿದೆ. ಈ ಪ್ರಶಸ್ತಿಗೆ ರಾಮಕೃಷ್ಣ ಅರ್ಹರಾಗಿದ್ದರು. ಹಿಜಾಬ್ ಸಂದರ್ಭ ಪ್ರಾಂಶುಪಾಲರು ಯಾವುದೇ ರಾಜಕೀಯ ಮಾಡಿರಲಿಲ್ಲ, ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರು ಎಂದವರು ತಿಳಿಸಿದರು.

ಉಡುಪಿ ಜಿಲ್ಲೆ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ವಿಶ್ವ ಮಟ್ಟದಲ್ಲಿ ಗುರುತಿಸಿ ಕೊಂಡಿದ್ದು, ಈ ಜಿಲ್ಲೆಯ ಓರ್ವ ದಕ್ಷ ಪ್ರಾಮಾಣಿಕ ಶಿಕ್ಷಕರಿಗೆ ಮಾಡಿರುವ ಅಪಮಾನ ಇಡೀ ಜಿಲ್ಲೆಯ ಶಿಕ್ಷಣ ವ್ಯವಸ್ಥೆಗೆ ಮಾಡಿದ ಅವಮಾನ.ಶಾಲೆಯ ಶಿಕ್ಷಣ ವ್ಯವಸ್ಥೆಯನ್ನು ಕಾಪಾಡಲು ಮುಂದಾದ ಪ್ರಾಂಶುಪಾಲರನ್ನು ಗುರಿಯಾಗಿಸಿ ಮಾನಸಿಕ ಸ್ಥೈರ್ಯ ಕುಗ್ಗಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದವರು ಆರೋಪಿಸಿದರು.

ರಾಜ್ಯ ಸರಕಾರ ತಕ್ಷಣ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಿ ಪ್ರಶಸ್ತಿಗೆ ಅತ್ಯಂತ ಅರ್ಹರಾದ ಬಿ.ಜಿ.ರಾಮಕೃಷ್ಣರಿಗೆ ಪ್ರಶಸ್ತಿ ನೀಡಿ ಗೌರವಿಸಬೇಕು. ತಪ್ಪಿದಲ್ಲಿ ಜಿಲ್ಲೆಯ ಶಿಕ್ಷಕರಿಗೆ ನೈತಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಹೋರಾಟ ಮಾಡುವು ದಾಗಿ ಶಾಸಕ ಯಶಪಾಲ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News