ಕಾರ್ಕಳ: ಕಾಳಿಕಾಂಬಾ ಜ್ಯೋತಿ ಯುವಕ ಮಂಡಲದ 63ನೇ ವಾರ್ಷಿಕೋತ್ಸವ

Update: 2024-02-06 06:41 GMT

ಕಾರ್ಕಳ : ಜ್ಯೋತಿ ಯುವಕ ಮಂಡಲ (ರಿ) ಕಾಳಿಕಾಂಬ ಇದರ 63ನೇ ವಾರ್ಷಿಕೋತ್ಸವ ಹಾಗೂ ಮಹಿಳಾ ಮಂಡಲದ 20ನೇ ವರ್ಷಾಚರಣೆಯು ಫೆಬ್ರವರಿ 9 ರಿಂದ 11 ವರೆಗೆ ಕಾರ್ಕಳ ಕಾಳಿಕಾಂಬಾ ಜ್ಯೋತಿ ಮೈದಾನದಲ್ಲಿ ನಡೆಯಲಿದೆ.

ಫೆಬ್ರವರಿ 9 ರಂದು ಸಂಜೆ 6 ರಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ,

ಫೆಬ್ರವರಿ 10 ಶನಿವಾರ ಬೆಳಿಗ್ಗೆ 10 ಕ್ಕೆ ಧ್ವಜಾರೋಹಣ, ಸಾಯಂಕಾಲ 7:30 ರಿಂದ ಸಭಾಕಾರ್ಯಕ್ರಮ ಸಾಧಕರಿಗೆ ಸನ್ಮಾನ ಮತ್ತು ಮಂಡಲದ ಸದಸ್ಯರಿಂದ ನೃತ್ಯ ವೈಭವ- ಸಂಗೀತ ರಸಮಂಜರಿ,

ಫೆಬ್ರವರಿ 11 ಆದಿತ್ಯವಾರ ಬೆಳಿಗ್ಗೆ 10 ರಿಂದ ಮಹಿಳಾ ಮಂಡಲದ ಸದಸ್ಯರ ಸ್ನೇಹಸಮ್ಮಿಲನ ಮತ್ತು ಗೌರವಾರ್ಪಣೆ,

ಸಾಯಂಕಾಲ 6:30 ಸಭಾಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ರಚಿಸಿ ನಿರ್ದೇಶಿಸಿರುವ ತುಳು ಸಾಂಸಾರಿಕ ನಾಟಕ ಮೈತೆದಿ ಪ್ರದರ್ಶನಗೊಳ್ಳಲಿದೆ.

ಸಮಾರಂಭದ ಮುಖ್ಯ ಅಥಿತಿಗಳಾಗಿ ಉಪನ್ಯಾಸಕಿ, ಲೇಖಕಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಜ್ಯೋತಿ ಗುರುಪ್ರಸಾದ್, ಅಮರ ಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಶಿಲ್ಪಿ ರಾಮಚಂದ್ರ ಆಚಾರ್ಯ, ನಿವೃತ್ತ ಮುಖ್ಯ ಶಿಕ್ಷಕಿ  ಇಂದಿರಾ ಶಾಂತರಾಮ್, ಸಾಪ್ಟ್ ವೇರ್ ಡೈರೆಕ್ಟರ್ ನವೀನ್ ಸುವರ್ಣ, ಉದ್ಯಮಿ ರಕ್ಷಾ ಶೆಟ್ಟಿ, ವಿವೇಕಾನಂದ ಶೆಣೈ, ಹಾಗೂ ಶ್ರೀಮತಿ ಸುರೇಖ ಪ್ರದೀಪ್ ಭಾಗವಹಿಸಲಿದ್ದು ಅಭಿನಂದನೆಯನ್ನು ಸ್ವೀಕರಿಸಲಿದ್ದಾರೆ.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಂತೋಷ್ ಡಿಸೋಜ, ನಾಗರಾಜ್ ಭಟ್,  ಅದಿತ್ಯ,  ಶಾನ್ವಿ ಬಲ್ಲಾಳ್, ದೀಪಶ್ರಿ ಮಾಳ, ಕಿಯೋರಾ ಪಾಯಸ್, ಮೊದಲಾದವರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯುವಕ ಮಂಡಲದ ಅದ್ಯಕ್ಷ ಸುಧಾಕರ್ ಕೋಟ್ಯಾನ್ ಹಾಗೂ ಮಹಿಳಾ ಮಂಡಲದ ಅದ್ಯಕ್ಷೆ ಶ್ರೀಮತಿ ದಿವ್ಯಾ ರಾವ್ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News