ಕಾರ್ಕಳ: ಹಣ ಹೂಡಿಕೆ ಹೆಸರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗೆ 7 ಲಕ್ಷ ರೂ. ವಂಚನೆ
Update: 2024-02-10 15:28 GMT
ಕಾರ್ಕಳ, ಫೆ.10: ಹಣ ಹೂಡಿಕೆ ಮಾಡುವ ಹೆಸರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಲಕ್ಷಾಂತರ ರೂ. ವಂಚನೆ ಮಾಡಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಸಿಸ್ಟಮ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಕಾರ್ಕಳದ ಶಿವಪ್ರಸಾದ್(26) ಎಂಬವರಿಗೆ ಹಣ ಹೂಡಿಕೆ ಮಾಡುವ ಕುರಿತು 2023ರ ನ.29ರಂದು ಮೊಬೈಲ್‌ಗೆ ಸಂದೇಶ ಬಂದಿದ್ದು, ಅದರಲ್ಲಿನ ಲಿಂಕ್ ಡೌನ್‌ಲೋಡ್ ಮಾಡಿ ಹಂತ ಹಂತವಾಗಿ 7,35,827ರೂ. ಹಣವನ್ನು ತನ್ನ ಬ್ಯಾಂಕ್ ಖಾತೆಯಿಂದ ಆರೋಪಿಗಳು ತಿಳಿಸಿದ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ಬಳಿಕ ಆರೋಪಿಗಳು ಹಣ ವಾಪಾಸ್ಸು ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.