ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ (ರಿ) ಅಸ್ತಿತ್ವಕ್ಕೆ
ಕಾರ್ಕಳ: ಕಾರ್ಕಳ ಕ್ಷೇತ್ರದ ಎರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಲೂರು ಉಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಪರಶುರಾಮ ಮೂರ್ತಿಯನ್ನು ಪುನರ್ ಸ್ಥಾಪಿಸಲು ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ.(ರಿ) ಎಂಬ ಸಮಿತಿಯನ್ನು ರಚಿಸಲಗಿದೆ.
ಸಮಿತಿಯ ಮೊದಲ ಸಭೆಯು ಉಡುಪಿಯ ಮಥುರಾ ಹೋಟೆಲಿನಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಕೆ ಕೃಷ್ಣಮೂರ್ತಿ ಆಚಾರ್ಯ ಮತ್ತು ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ ಯವರ ನೇತೃತ್ವತ್ವದಲ್ಲಿ ನಡೆಯಿತು.
ಸಮಿತಿಯ ಸಲಹೆಗಾರರಾದ ವಿಶ್ವಾಸ್ ವಿ ಅಮೀನ್, ಉಪಾಧ್ಯಕ್ಶರಾದ ನಲ್ಲೂರು ಪ್ರದೀಪ್ ಶೆಟ್ಟಿ , ಬೆಳುವಾಯಿಯ ನಿತಿನ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಲಾಲ್ ಕಾಂತಾವರ, ಜತೆ ಕಾರ್ಯದರ್ಶಿ ಸಂತೋಷ್ ಬೋಳ, ಕೋಶಾಧಿಕಾರಿ ಶಶಿಧರ ಹವಾಲ್ದಾರ್ ಬೆಟ್ಟು, ಸಮಿತಿಯ ಸದಸ್ಯರಾದ ನವೀನ್ ಸಾಲಿಯಾನ್ ಪೆರ್ಡೂರು, ವಿಗ್ನೇಶ್ ಚೇರ್ಕಾಡಿ, ಹರೀಶ್ ಪೂಜಾರಿ ಕಡ್ತಲ, ದಿನೇಶ್ ಕುಮಾರ್ ಹೆಬ್ರಿ ಚಾರ ಮತ್ತು ರಾಜೇಶ್ ಶೆಟ್ಟಿ ಮರ್ಣೆ ಯವರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಮಿತಿಯ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮುಂಬರುವ ದಿನಗಳಲ್ಲಿ ಥೀಮ್ ಪಾರ್ಕ್, ನಲ್ಲಿ ಪರಶುರಾಮನ ಪ್ರತಿಮೆಯನ್ನು ಪುನರ್ ಸ್ಥಾಪನೆ ಮಾಡುವಲ್ಲಿ ಹಾಗೂ ಈ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ಸಮಿತಿಯ ಪಾತ್ರಗಳ ಬಗ್ಗೆ ಹಾಗೂ ಸಮಿತಿಯ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಸಮಿತಿಯ ಗೌರವಾಧ್ಯಕ್ಷರಾದ ಕೆ.ಕೃಷ್ಣಮೂರ್ತಿ ಆಚಾರ್ಯರವರು ತಮ್ಮ ಅಭಿಪ್ರಾಯ ತಿಳಿಸಿದರು.
ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ ಅವರು ಈ ಬಗ್ಗೆ ಯಾವ ರೀತಿಯಲ್ಲಿ ಮುಂದಿನ ದಿನಗಳು ನಿರ್ಣಾಯಕಯಕವಾಗಿದ್ದು ಸಭೆಯು ಕರಾವಳಿ ಜಿಲ್ಲೆಯ ಪ್ರತೀ ತಾಲೂಕು ಹಾಗೂ ಗ್ರಾಮಮಟ್ಟದಿಂದ ಹಿಂದೂ ಧರ್ಮ ಹಾಗೂ ಹಿಂದೂಗಳ ದೇವರು ಹಾಗೂ ವಿಷ್ಣುವಿನ ದಶಾವತಾರಗಳಲ್ಲೊಂದಾದ ಪರಶುರಾಮ ದೇವರ ಬಗ್ಗೆ ನೆಡೆಯಬೇಕಾದ ಜಾಗೃತಿ ಹಾಗೂ ಸನಾತನ ಧರ್ಮದ ರಕ್ಷಣೆ ಹಾಗೂ ಅಗತ್ಯತೆ ಬಗ್ಗೆ ತಿಳಿಸಿದರು.
ಸಭೆಯಲ್ಲಿ ಸಮಿತಿಯ ಸದಸ್ಯರು ಸೂಕ್ತ ರೀತಿಯಲ್ಲಿ ಅಧಿಕಾರಿಗಳ ಜೊತೆ, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸರಕಾರದ ಮಟ್ಟದಲ್ಲಿ ಪರಶುರಾಮ ಮೂರ್ತಿಯನ್ನು ಪುನರ್ ಸ್ಥಾಪಿಸಲು ಕೈಗೊಳ್ಳಬೇಕಾದ ವಿಷಯಗಳ ಬಗ್ಗೆ ಚರ್ಚಿಸಿದರು
ಪ್ರಧಾನ ಕಾರ್ಯದರ್ಶಿ ಪ್ರದೀಪ ಕಾಂತಾವರ ವಂದಿಸಿದರು.