ಕೊಂಕಣ ರೈಲ್ವೆ: ಟಿಕೆಟ್ ರಹಿತ ಪ್ರಯಾಣಿಕರಿಂದ ಜನವರಿಯಲ್ಲಿ 2.17 ಕೋಟಿ ರೂ. ದಂಡ ವಸೂಲು

Update: 2024-02-13 14:52 GMT

ಸಾಂದರ್ಭಿಕ ಚಿತ್ರ

ಉಡುಪಿ: ಕೊಂಕಣ ರೈಲ್ವೆಯು ಕಳೆದ ಜನವರಿ ಒಂದೇ ತಿಂಗಳಲ್ಲಿ ರೈಲುಗಳಲ್ಲಿ ಟಿಕೆಟ್ ರಹಿತವಾಗಿ, ಅನಧಿಕೃತವಾಗಿ ಪ್ರಯಾಣಿಸುತ್ತಿದ್ದ ಒಟ್ಟು 9,548 ಮಂದಿ ಪ್ರಯಾಣಿಕರಿಂದ ಒಟ್ಟು 2,17,97,102ರೂ. ದಂಡವನ್ನು ವಸೂಲಿ ಮಾಡಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ರೈಲುಗಳಲ್ಲಿ ನಿರಂತರವಾಗಿ ಟಿಕೇಟ್ ತಪಾಸಣಾ ವ್ಯವಸ್ಥೆ ಜಾರಿಯಲ್ಲಿದ್ದು, ಟಿಕೆಟ್ ಇಲ್ಲದೇ ಅನಧಿಕೃತವಾಗಿ ಪ್ರಯಾಣಿಸುತ್ತಿರುವವರನ್ನು ಪತ್ತೆ ಹಚ್ಚಿ ಅವರಿಂದ ದಂಡವನ್ನು ವಸೂಲಿ ಮಾಡಲಾಗುತ್ತಿದೆ ಎಂದು ಹೇಳಿಕೆ ತಿಳಿಸಿದೆ.

2023ರ ಕೊನೆಯ ತ್ರೈಮಾಸಿಕದಲ್ಲಿ (ಅಕ್ಟೋಬರ್‌ನಿಂದ ಡಿಸೆಂಬರ್ ತನಕ) ಟಿಕೆಟ್ ರಹಿತ ಪ್ರಯಾಣಿಸುತ್ತಿದ್ದ 18,466 ಮಂದಿ ಪ್ರಯಾಣಿಕರನ್ನು ರೈಲ್ವೆ ಅಧಿಕಾರಿಗಳು ಪತ್ತೆಹಚ್ಚಿದ್ದು, ಅವರಿಂದ ಒಟ್ಟು 5,60,99,017 ರೂ ದಂಡ ವಸೂಲಿ ಮಾಡಿದ್ದಾರೆ ಎಂದೂ ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಕೊಂಕಣ ರೈಲ್ವೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸರಿಯಾದ ಟಿಕೇಟ್ ನೊಂದಿಗೆ ಪ್ರಯಾಣಿಸುವಂತೆ ಮನವಿ ಮಾಡಿ ರುವ ಅಧಿಕಾರಿಗಳು, ಪ್ರಯಾಣದ ನಡುವೆ ಉಂಟಾಗುವ ಅನಾನುಕೂಲತೆ ತಪ್ಪಿಸಲು ನೆರವಾಗುವಂತ ಕೋರಿದ್ದಾರೆ. ಕೆಆರ್‌ಸಿಎಲ್‌ನ ಮಾರ್ಗದಲ್ಲಿ ಮುಂದೆಯೂ ನಿರಂತರವಾಗಿ ಟಿಕೇಟ್ ತಪಾಸಣೆ ಪ್ರಕ್ರಿಯೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News