ಕುಂದಾಪುರ: ಶ್ರೀಗಂಧ ಮರದ ತುಂಡುಗಳು ಪೊಲೀಸ್‌ ವಶಕ್ಕೆ; ಆರೋಪಿಗಳಿಗೆ ಶೋಧ

Update: 2023-07-30 13:31 GMT

ಕುಂದಾಪುರ: ಅನುಮಾನಾಸ್ಪದ ಪಟ್ಟಾ ಜಾಗದಲ್ಲಿ ಶ್ರೀಗಂಧ ಮರವನ್ನು ಕಡಿದ ಬಗ್ಗೆ ಖಚಿತ ಮಾಹಿತಿಯಂತೆ ಕುಂದಾಪುರ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆದ ಘಟನೆ ಕುಂದಾಪುರ ತಾಲೂಕು ಬೆಳ್ಳಾಲ ಗ್ರಾಮದ ಕಾರಿಬೈಲು ಎಂಬಲ್ಲಿ ನಡೆದಿದೆ.

ಇಲ್ಲಿನ ಮನೆಯಯೊಂದರ ಸಮೀಪ ಅನುಮಾನಾಸ್ಪದ ಪಟ್ಟ ಸ್ಥಳದಲ್ಲಿ ಶ್ರೀಗಂಧದ ಮರವನ್ನು ಕಡಿದ ಬಗ್ಗೆ ಕುಂದಾಪುರ ವಲಯದ ಅರಣ್ಯ ಇಲಾಖೆಗೆ ಮಾಹಿತಿ ಬಂದ ಹಿನ್ನೆಲೆ ಈ ಕಾರ್ಯಾಚರಣೆ ಜು.29ರಂದು ನಡೆದಿದೆ. ಆರೋಪಿಗಳು ಸ್ಥಳೀಯರಾಗಿದ್ದು, ಅವರಸುಳಿವು ದೊರಕಿದ್ದು, ಶೀಘ್ರದಲ್ಲಿಯೇ ಅವರನ್ನು ಬಂಧಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 2 ಲಕ್ಷ ಎಂದು ಅಂದಾಜಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಕುಂದಾಪುರ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ. ನಾಯಕ್, ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿ ಕ್ಲಿಪರ್ಡ್ ಲೊಬೋ, ಕುಂದಾಪುರ ವಲಯ ಅರಣ್ಯಾಧಿಕಾರಿ ಟಿ. ಕಿರಣ್ ಬಾಬು ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಆನಂದ ಬಳೆಗಾರ, ಶರತ್ ಗಾಣಿಗ, ಗೀತ ಯಾಸಣ್ಣನವರ್, ಗಸ್ತು ಅರಣ್ಯ ಪಾಲಕ ರಾಘವೇಂದ್ರ, ವಿಜಯ ಕೆ, ಅರಣ್ಯ ವೀಕ್ಷಕ ಉದಯ ಮತ್ತು ವಾಹನ ಚಾಲಕ ಅಶೋಕ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News