ಕುಂದಾಪುರ: ಕಾಲೇಜು ನಿಯಮಗಳ ಬದಲಾವಣೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಕುಂದಾಪುರ : ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿನ ಕೆಲವು ನಿಯಮ ಬದಲಾವಣೆ ಖಂಡಿಸಿ ಎನ್‌ಎಸ್‌ಯುಐ ನೇತೃತ್ವದಲ್ಲಿ ವಿದ್ಯಾರ್ಥಿ ಗಳು ಕಾಲೇಜಿನ ಎದುರುಗಡೆ ಬುಧವಾರ ನಡೆಸಿದರು.
ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಶೌಚಾಲಯ ಶುಚಿಯಾಗಿಲ್ಲ. ಮ್ಯಾನೇಜರ್ ಬಳಿ ವಿದ್ಯಾರ್ಥಿಗಳು ತೆರಳಿದರೆ ವ್ಯಂಗ್ಯವಾಗಿ ನಡೆದುಕೊಳ್ಳುತ್ತಾರೆ. ಪ್ರಾಂಶು ಪಾಲರ ಬಳಿ ನೇರ ಮಾತನಾಡಲು ಅವಕಾಶ ನೀಡುವುದಿಲ್ಲ. ತೆಗೆದುಕೊಳ್ಳುವ ಶುಲ್ಕಕ್ಕೆ ಸರಿಯಾಗಿ ಸೌಲಭ್ಯ ನೀಡುತ್ತಿಲ್ಲ. ತರಗತಿ ಕೊಠಡಿ ಸರಿಯಾಗಿಲ್ಲ, ಫ್ಯಾನ್ ತಿರುಗುವುದಿಲ್ಲ. ಕಾಲೇಜು ಶಾರ್ಟೇಜ್ ಶುಲ್ಕಕ್ಕೆ ಪಾವತಿ ಚೀಟಿ ನೀಡುವುದಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.
ಇಲ್ಲಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಲಾಗುತ್ತದೆ. ತರಗತಿ ಇಲ್ಲದಿದ್ದಾಗ ಮಾತ್ರ ನಾವು ಹೊರಗೆ ಹೋಗುತ್ತೇವೆ. ಮೊಬೈಲ್ ತರುವುದಿಲ್ಲ. ನಮಗೆ ಹಳೆ ನಿಯಮವೇ ಇರಲಿ. ಶೈಕ್ಷಣಿಕ ವಿಚಾರ ಹೊರತುಪಡಿಸಿ ಪಠ್ಯೇತರ ಚಟುವಟಿಕೆಗೆ ಯಾವುದೇ ಪ್ರೋತ್ಸಾಹ ನೀಡುತ್ತಿಲ್ಲ. ನಾವೇ ಹಣ ಹೊಂದಿಸ ಬೇಕಾಗಿದೆ ಎಂದು ವಿದ್ಯಾರ್ಥಿನಿ ದೂರಿದರು.
ಎನ್‌ಎಸ್‌ಯುಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯ್ಯದ್ ಫುರ್ಖಾನ್ ಹೆಮ್ಮಾಡಿ ಮಾತನಾಡಿ, ಪ್ರಾಂಶುಪಾ ಲರಿಗೆ ನೀಡಿದ ಮನವಿಗೆ ಪೂರಕ ಸ್ಪಂದನೆ ನೀಡದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ. ಪ್ರಾಂಶು ಪಾಲರು ಹಾಗೂ ಆಡಳಿತ ಮಂಡಳಿ ನಿಯಮ ಬದಲಾಯಿಸದೇ ಇದ್ದರೆ ಹೋರಾಟ ನಿಶ್ಚಿತ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ಜಿಲ್ಲಾ ಉಪಾಧ್ಯಕ್ಷ ಸಯ್ಯದ್ ಅದ್ನಾನ್, ಕುಂದಾಪುರ ತಾಲೂಕು ಉಪಾಧ್ಯಕ್ಷರಾದ ವಿವೇಕ್, ಸ್ವಸ್ತಿಕ್, ಭಂಡಾಕಾರ್ಸ್ ಕಾಲೇಜು ಎನ್‌ಎಸ್‌ಯುಐ ಅಧ್ಯಕ್ಷ ಸುಮುಖ್ ಶೇರಿಗಾರ್ ಮೊದಲಾದವರು ಉಪಸ್ಥಿತರಿದ್ದರು.
‘ವಿದ್ಯಾರ್ಥಿಗಳ ದಾಖಲಾತಿ ವೇಳೆ ಕೆಲವೊಂದು ವಿಚಾರಗಳ ಬಗ್ಗೆ ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತದೆ. ಪೋಷಕರ ಸಭೆಯಲ್ಲಿ ಕಾಲೇಜು ಆವರಣದಲ್ಲಿ ಮೊಬೈಲ್ ಬಳಕೆ, ಹೊರಗಡೆ ತಿರುಗಾಡುವುದರ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆ ಆಡಳಿತ ಮಂಡಳಿ, ಟ್ರಸ್ಟ್ ತೀರ್ಮಾನದಂತೆ ಈ ಬದಲಾವಣೆ ಮಾಡಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ನಿಯಮ ರೂಪಿಸಲಾಗಿದೆ. ಯೂನಿವರ್ಸಿಟಿ ನಿಗದಿ ಮಾಡಿದ ಶುಲ್ಕವನ್ನು ಮಾತ್ರ ಪಡೆಯ ಲಾಗುತ್ತದೆ. ಎಲ್ಲವೂ ರಶೀದಿ ಮುಖಾಂತರವೇ ನಡೆಯುತ್ತದೆ’
-ಡಾ.ಶುಭಕರಾಚಾರಿ, ಪ್ರಾಂಶುಪಾಲರು, ಭಂಡಾರ್‌ಕಾರ್ಸ್ ಕಾಲೇಜು