ಕುಂದಾಪುರ ತಾಲೂಕು ಮಟ್ಟದ ಆಶಾ ಕಾರ್ಯರಕರ್ತೆಯರ ಸಮ್ಮೇಳನ
ಕುಂದಾಪುರ, ಆ.12: ರಾಜ್ಯ ಸಂಯುಕ್ತ ಆಶಾ ಕಾರ್ಯಕಕರ್ತೆಯರ ಸಂಘ ಕುಂದಾಪುರ ತಾಲೂಕು ಸಮಿತಿ ವತಿಯಿಂದ ಕುಂದಾಪುರ ತಾಲೂಕು ಮಟ್ಟದ ಆಶಾ ಕಾರ್ಯಕರ್ತೆಯರ ಸಮ್ಮೇಳನವು ರವಿವಾರ ಕುಂದಾಪುರದ ಕುಂದೇಶ್ವರ ದೇವಸ್ಥಾನ ಸಮೀಪದ ರಾಘವೇಂದ್ರ ಮಠದ ವಾದಿರಾಜ ಸಭಾಂಗಣದಲ್ಲಿ ನಡೆಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ್ ಕೆ. ಮಾತನಾಡಿ, ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಮೂಲಕ ಸಕಾಲದಲ್ಲಿ ಗೌರವಧನ ಪಡೆಯತ್ತಿ ದ್ದಾರೆ. ಬೇರೆ ಬೇರೆ ಕಡೆಯಿಂದ ಬಂದ ಪರಿಶೀಲನಾ ತಂಡದವರು ಇದನ್ನು ದೃಢೀಕರಿಸಿದ್ದಾರೆ. ಕುಂದುಕೊರತೆಗಳ ಸಭೆಯಲ್ಲಿ ಸಮಸ್ಯೆಗಳನ್ನು ಹೇಳಿಕೊಂಡರೆ ಪರಿಹಾರ ಸಾಧ್ಯ ಎಂದು ಹೇಳಿದರು.
ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ.ಭಟ್ ಮಾತನಾಡಿ, ಪ್ರಥಮ ರಾಜ್ಯ ಸಮ್ಮೇಳನವು ಸೆ.14 ಹಾಗೂ 15ರಂದು ಕಲಬುರಗಿಯಲ್ಲಿ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಈ ತಾಲೂಕು ಸಮ್ಮೇಳನ ನಡೆಯುತ್ತಿದೆ. ರಾಜ್ಯದಲ್ಲಿ 47ಸಾವಿರ ಕಾರ್ಯಕರ್ತೆಯರಿದ್ದು, 160 ತಾಲೂಕು ಸಮ್ಮೇಳನ 12 ಜಿಲ್ಲಾ ಸಮ್ಮೇಳನಗಳಾಗಿದೆ. ಸೆ.1ರಂದು ಉಡುಪಿಯ ಕಡಿಯಾಳಿಯಲ್ಲಿ ಜಿಲ್ಲಾ ಸಮ್ಮೇಳನ ನಡೆಯಲಿದೆ ಎಂದರು.
ಆಶಾ ಕಾರ್ಯಕರ್ತೆಯರನ್ನು ದಿನಕ್ಕೆ 3 ಗಂಟೆ ಎಂದು ಹೇಳಿ ವಾರದ ಅಷ್ಟೂ ದಿನ, ದಿನಪೂರ್ತಿ ದುಡಿಸುತ್ತಿದ್ದಾರೆ. ನಗರ ಹಾಗೂ ಹಳ್ಳಿಗಳಲ್ಲಿ ತಳಮಟ್ಟದ ಆರೋಗ್ಯ ಕಾರ್ಯಲಕರ್ತೆಯರಾಗಿ, ಗ್ರಾಮ ನೈರ್ಮಲ್ಯ, ಸ್ವಚ್ಛತೆ, ಗರ್ಭಿಣಿಯರ ಆರೋಗ್ಯ, ಬಾಣಂತಿ, ಮಗುವಿನ ಆರೋಗ್ಯ ಹೀಗೆ ಹಲವಾರು ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆ ಯರ ಜೀವನ ಭದ್ರತೆಗಾಗಿ ಹಾಗೂ ಸರಕಾರವು ತಮ್ಮ ಪರವಾದ ನೀತಿಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಸಂಘದ ಗೌರವ ಅಧ್ಯಕ್ಷೆ ಮಂಜಮ್ಮ ಶೆಡ್ತಿ, ಆಶಾ ಯೂನಿಯನ್ ಉಡುಪಿ ಜಿಲ್ಲಾ ಮೇಲ್ವಿಚಾರಕಿ ಹರಿಣಿ ಆಚಾರ್ಯ, ಜಿಲ್ಲಾಧ್ಯಕ್ಷೆ ಸುಹಾಸಿನಿ ಶೆಟ್ಟಿ, ತಾಲೂಕು ಅಧ್ಯಕ್ಷೆ ಸಾಧು ಕೋಡಿ ಉಪಸ್ಥಿತರಿದ್ದರು. ಚಂದ್ರಕಲಾ ಕುಂಭಾಶಿ ವರದಿ ವಾಚಿಸಿದರು.