ಕುಂದಾಪುರ | ಗದ್ದೆಯಲ್ಲಿ ಕೃಷಿ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ನಂದಿಸಲು ಹೋದ ರೈತ ಸಜೀವ ದಹನ

Update: 2025-04-05 15:36 IST
ಕುಂದಾಪುರ | ಗದ್ದೆಯಲ್ಲಿ ಕೃಷಿ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ನಂದಿಸಲು ಹೋದ ರೈತ ಸಜೀವ ದಹನ
  • whatsapp icon

ಕುಂದಾಪುರ : ಗದ್ದೆಯಲ್ಲಿ ಕೃಷಿ ತ್ಯಾಜ್ಯ(ಸುಡುಮಣ್ಣು)ಕ್ಕೆ ಹಾಕಿದ್ದ ಬೆಂಕಿ ನಂದಿಸಲು ಹೋದ ರೈತರೊಬ್ಬರು ಅದೇ ಬೆಂಕಿಗೆ ಬಿದ್ದು ಸಜೀವ ದಹನವಾಗಿ ಮೃತಪಟ್ಟ ಘಟನೆ ಕಾಳಾವರದ ಬಡಾಗುಡ್ಡೆ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಮೃತರನ್ನು ಕಾಳಾವರ ನಿವಾಸಿ ಮಹಾಲಿಂಗ ದೇವಾಡಿಗ ಎಂದು ಗುರುತಿಸಲಾಗಿದೆ. ಇವರು ಕೃಷಿ ಉದ್ದೇಶಕ್ಕಾಗಿ ತಮ್ಮ ಗದ್ದೆಯಲ್ಲಿ ಮಗಳು ಬೇಬಿಯೊಂದಿಗೆ ಕೃಷಿ ತ್ಯಾಜ್ಯ(ಸುಡುಮಣ್ಣು)ಕ್ಕೆ ಬೆಂಕಿ ಹಾಕಿದ್ದರು. ಈ ವೇಳೆ ಬೆಂಕಿಯ ಕೆನ್ನಾಲಗೆ ಸುತ್ತಲೂ ಆವರಿಸಿದ್ದು, ಸಮೀಪದ ನಾಗಬನಕ್ಕೂ ಬೆಂಕಿ ಹಬ್ಬುತ್ತಿತ್ತೆನ್ನಲಾಗಿದೆ. ಇದರಿಂದ ಕೂಡಲೇ ಎಚ್ಚೆತ್ತ ಬೇಬಿ ಅಲ್ಲಿಗೆ ತೆರಳಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದರು.

ಆದರೆ ಈ ವೇಳೆ ಇಲ್ಲಿ ಮಹಾಲಿಂಗ ದೇವಾಡಿಗ ಬೆಂಕಿಯ ಮಧ್ಯೆ ಸಿಲುಕಿ ಸಾವನ್ನಪ್ಪಿದರು ಎಂದು ತಿಳಿದುಬಂದಿದೆ. ಕೂಡಲೇ ಅಗ್ನಿಶಾಮಕದಳ ದವರಿಗೆ ಮಾಹಿತಿ ನೀಡಲಾಯಿತು. ಆದರೆ ಅಗ್ನಿಶಾಮಕದಳದ ವಾಹನ ಸ್ಥಳಕ್ಕೆ ಬರಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಹಿನ್ನೆಲೆ ಕಾರ್ಯಾಚರಣೆಗೆ ತೊಡಕಾಗಿತ್ತು. ಇದರಿಂದ ರೈತ ಸಜೀವ ದಹನವಾಗಿದ್ದಾರೆ.

ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಭೀಮಾಶಂಕರ್ ಹಾಗೂ ಸಿಬ್ಬಂದಿಗಳು,ಅಗ್ನಿಶಾಮಕದಳದವರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News