ಕುಂದಾಪುರ ಕಲಾಕ್ಷೇತ್ರದಿಂದ ಡಾ.ರಾಜಕುಮಾರ್ ಪುಣ್ಯಸ್ಮರಣೆ

ಕುಂದಾಪುರ, ಎ.13: ಡಾ.ರಾಜಕುಮಾರ್ ಧನದಾಹಿ ಆಗಿರದೆ ಗುಣಗ್ರಾಹಿ ಆಗಿದ್ದರು. ಅವರು ತನ್ನ ಅನುಪಮ, ಅಸಾಧಾರಣ, ಅದ್ವಿತೀಯ ಸ್ವಭಾವ ದಿಂದ, ನಡವಳಿಕೆಯಿಂದ, ವಿನಯದಿಂದ ಸಮಯ ಪರಿಪಾಲನೆಯಿಂದ, ಅಭಿನಯದಿಂದ, ಸಂಬಾಷಣೆ ಹೇಳುವ ಪ್ರತಿಭೆಯಿಂದ, ಮಾಧುರ್ಯಭರಿತ ಕಂಠ ಸಿರಿಯಿಂದ, ತಾನು ಮೈಗೂಡಿಸಿಕೊಂಡ ಯೋಗದ ಹವ್ಯಾಸದಿಂದ ಸಿದ್ದಿಸಿಕೊಂಡ ಸುಂದರವಾದ ಮೈಕಟ್ಟಿನಿಂದ ಎಲ್ಲರನ್ನು ಬೆರಗುಗೊಳಿಸಿದ ಕಲಾಮಾಣಿಕ್ಯ ಎಂದು ಗೀತಗಾಯನದ ಸಂಚಾಲಕ ಸನತ್ ಕುಮಾರ್ ರೈ ಹೇಳಿದ್ದಾರೆ.
ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಕಛೇರಿಯಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾದ ಡಾ.ರಾಜ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಕಿಶೋರ್ ಕುಮಾರ್, ಕಾರ್ಯದರ್ಶಿ ತ್ರಿವಿಕ್ರಮ ಪೈ, ಕೆ.ಆರ್.ನ್ಕ್‌ಾ, ರಾಜೇಶ್ ಕಾವೇರಿ, ಪ್ರವೀಣ್ ಕುಮಾರ್ ಟಿ., ಗೋಪಾಲ ವಿ, ಶ್ರೀಧರ ಸುವರ್ಣ, ದಾಮೋದರ್ ಪೈ, ರಾಮಚಂದ್ರ ಬಿ.ಎನ್, ಜ್‌ೋ ಕರ್ವೆಲ್ಲೋ, ಗೀತಗಾಯನದ ಸದಸ್ಯರಾದ ಮೋಹನ್ ಸಾರಂಗ್, ಡಾ.ರಾಜಾರಾಮ್, ಡಾ.ಅಮ್ಮಾಜಿ, ಎಚ್.ಗುರು ಪ್ರಸಾದ್, ಪಾರ್ವತಿ ಟೀಚರ್, ಡಾ.ನಂದಿನಿ, ಕಿರಣ್ ಶಿವಕುಮಾರ್, ಜ್ಯೋತಿ ಶರತ್, ವೀಣಾ ಕಮಲಾಕ್ಷ, ಶಂಕರನಾರಾಯಣ, ಡಾ.ಕೃಷ್ಣರಾವ್, ಡಾ.ಹರಿಪ್ರಸಾದ್, ಮೀರಾಬಾ ಕಾಮತ್, ಆನಂದ ಕೋಡಿ, ಡಾ.ದುರ್ಗಾ ಪ್ರಸಾದ ಹೆಗ್ಡೆ, ಹೇಮಾ ಆರ್., ಸುಗುಣಾ ರಮೇಶ್, ಸೌಜನ್ಯ, ಕಮಲ್ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.