ಭಾಷೆಗೆ ಎಲ್ಲರನ್ನು ಒಳಗೊಳ್ಳುವ ಅಪಾರ ಶಕ್ತಿ ಇದೆ: ಪ್ರೊ.ಕೆ.ಪಿ.ರಾವ್

Update: 2023-08-06 11:47 GMT

ಉಡುಪಿ: ಭಾಷೆ ಈ ಲೋಕದಲ್ಲಿ ಇರುವುದು ಅತ್ಯಂತ ಸ್ಪಷ್ಟ. ಒಬ್ಬರೊಬ್ಬರನ್ನು ಅರ್ಥ ಮಾಡಿಕೊಳ್ಳಲು ಮತ್ತು ಒಬ್ಬರನ್ನು ಬೆಳೆಸಿ ಹಾಗೂ ಕಲಿಸಲು ಸಾಧ್ಯ ಇರುವ ಬಹಳ ದೊಡ್ಡ ಮಾಧ್ಯಮ ಭಾಷೆಯಾಗಿದೆ. ತೇಲಿಸುವ ಹಾಗೂ ಮುಳುಗಿಸುವ ಮತ್ತು ಎಲ್ಲರನ್ನು ಒಳಗೊಳ್ಳುವಂತಹ ಅಪಾರ ಶಕ್ತಿ ಭಾಷೆಗೆ ಇದೆ ಎಂದು ಭಾಷಾ ವಿಜ್ಞಾನಿ, ಕೀಲಿಮಣೆ ವಿನ್ಯಾಸಕ ನಾಡೋಜ ಪ್ರೊ.ಕೆ.ಪಿ.ರಾವ್ ಹೇಳಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಸಹಕಾರದಲ್ಲಿ ನಾಡೋಜ ಪ್ರೊ.ಕೆ.ಪಿ.ರಾವ್ ಅಭಿನಂದನ ಸಮಿತಿಯ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಹಮ್ಮಿಕೊಳ್ಳ ಲಾದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು.

ದೇವರು ಮತ್ತು ಭಾಷೆ ಅತ್ಯಂತ ವಿಶಿಷ್ಟವಾದ ಸೃಷ್ಠಿ. ಭ್ರಮಲೋಕದಲ್ಲಿರುವ ಇವು ಎರಡೂ ಕಣ್ಣಿಗೆ ಕಟ್ಟುವಂತದಲ್ಲ ಮತ್ತು ಹಿಡಿತಕ್ಕೆ ಸಿಗುವಂತದಲ್ಲ. ಬೇಕಾದನ್ನು ಮಾಡು ವಂತಹ ಸಾಧ್ಯತೆ ಮತ್ತು ಎಲ್ಲಿಂದ ಎಲ್ಲಿಗೂ ನಮ್ಮನ್ನು ಹೊಯ್ಯ ಬಲ್ಲ ಶಕ್ತಿ ದೇವರು ಮತ್ತು ಭಾಷೆಗೆ ಇದೆ ಎಂದರು.

ಅಭಿನಂದನ ಭಾಷಣ ಮಾಡಿದ ಸಾಹಿತಿ ಜಯಂತ್ ಕಾಯ್ಕಿಣಿ, ಚಿಂತನೆ ಇಲ್ಲದ ತನ್ಮಯತೆ ಹಾಗೂ ತನ್ಮಯತೆ ಇಲ್ಲದ ಚಿಂತನೆಶೀಲ ಎರಡೂ ಪ್ರಯೋಜನ ಇಲ್ಲ. ಆದರೆ ಅವು ಎರಡೂ ಒಂದಾದ ಪವಾಡ ವ್ಯಕ್ತಿತ್ವ ಕೆ.ಪಿ. ರಾವ್ ಅವರದ್ದು. ಹೀಗಾಗಿ ಇವರ ವ್ಯಕ್ತಿತ್ವ ಬಹಳ ಆಸಕ್ತಿದಾಯಕವಾಗಿದೆ ಎಂದು ತಿಳಿಸಿದರು.

ಕೆ.ಪಿ. ರಾವ್ ಈಗ ನಾಟಕದಲ್ಲಿನ ಹಿರಿಯರ ಪಾತ್ರವನ್ನು ಹಾಕಿಕೊಂಡಿ ದ್ದಾರೆಯೇ ಹೊರತು ಈಗಲೂ ಯುವಕನೇ ಆಗಿದ್ದಾರೆ. ಅದರಲ್ಲಿ ಇವರು ಮಿಂಚು ಕಣ್ಣಿನ ಯುವಕ. ಕೆ.ಪಿ.ರಾವ್ ವಿವಿಧ ಬಗೆಯ ಜೀವನವನ್ನು ಒಂದೇ ಬಾರಿಗೆ ಅನುಭವಿಸಿದ ವರು. ನಾವೆಲ್ಲ ನಮ್ಮ ಜೀವನವನ್ನು ಸರಳೀಕೃತಗೊಳಿಸಿ ದ್ದೇವೆ. ಆದರೆ ಕೆ.ಪಿ.ರಾವ್ ಅದನ್ನು ಮೀರಿದ ಬದುಕು ನಡೆಸುತ್ತಿದ್ದಾರೆ. ಇವರ ಸ್ಪಂದನಶೀಲವಾದ ಮಾದರಿ. ಸಂಗೀತ, ಸಿನೆಮಾ, ಭಾಷೆಯ ಬಗ್ಗೆ ಇವರು ಬಹಳ ಆಸಕ್ತಿ ಹೊಂದಿದ್ದರು ಎಂದರು.

ನವದೆಹಲಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ, ನಿವೃತ್ತ ಉಪನ್ಯಾಸಕ ಸೇಡಿಯಾಪು ಜಯರಾಮ್ ಭಟ್ ಮುಖ್ಯ ಅತಿಥಿಗಳಾಗಿದ್ದರು.

ಅಭಿನಂದನ ಸಮಿತಿಯ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ, ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು. ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಸ್ವಾಗತಿಸಿದರು. ರಾಜೇಶ್ ಭಟ್ ಪಣಿಯಾಡಿ ವಂದಿಸಿದರು. ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭ ಉದ್ಘಾಟನೆ: ಅಭಿನಂದನ ಸಮಾರಂಭವನ್ನು ಉಡುಪಿ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ನಿರ್ದೇಶಕ, ಮನೋ ವೈದ್ಯ ಡಾ.ಪಿ.ವಿ.ಭಂಡಾರಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ವಹಿಸಿದ್ದರು. ಮೂಡಬಿದಿರೆ ಜೈನ ಮಠದ ಮಠಾಧಿಪತಿ ಸ್ವಸ್ತಿಶ್ರೀ ಭಟ್ಚಾರಕ ಚಾರು ಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿ ಸಂದೇಶ ನೀಡಿದರು.

ಮುಖ್ಯ ಅತಿಥಿಗಳಾಗಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು. ಬಳಿಕ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು ನಡೆದವು. ತದನಂತರ ಕೆ.ಪಿ.ರಾವ್ ಅವರೊಂದಿಗೆ ಮಾತುಕತೆ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News