ಕುಂಭಮೇಳಕ್ಕೆ ಪ್ರಯಾಗ್‌ ರಾಜ್‌ಗೆ ಹೋದ ಕಾರ್ಕಳದ ವ್ಯಕ್ತಿ ನಾಪತ್ತೆ

Update: 2025-02-07 12:04 IST
ಕುಂಭಮೇಳಕ್ಕೆ ಪ್ರಯಾಗ್‌ ರಾಜ್‌ಗೆ ಹೋದ ಕಾರ್ಕಳದ ವ್ಯಕ್ತಿ ನಾಪತ್ತೆ
  • whatsapp icon

ಕಾರ್ಕಳ, ಫೆ.7: ಕುಂಭಮೇಳಕ್ಕೆ ಪ್ರಯಾಗ್‌ರಾಜ್ ರೈಲಿನಲ್ಲಿ ಹೊರಟ ಕಾರ್ಕಳ ಕಾಬೆಟ್ಟು ವಿ.ಸಿ.ರೋಡ್‌ನ ಭಾರತ್ ಬೀಡಿ ಕಾಲೋನಿ ನಿವಾಸಿ ಸುಧಾಕರ್(69) ಎಂಬವರು ನಾಪತ್ತೆಯಾಗಿದ್ದಾರೆ.

ಇವರು ಜ.25ರಂದು ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳದ ಪ್ರಯುಕ್ತ ಪ್ರಯಾಗ್ ರಾಜ್ ಮತ್ತು ಕಾಶಿಗೆ ಹೋಗುವುದಾಗಿ ತಿಳಿಸಿ ಹೊರಟಿದ್ದರು. ಹೋಗುವಾಗ ರೈಲು ಅದಲು ಬದಲಾಗಿ ಮಾರ್ಗ ತಪ್ಪಿರುವುದಾಗಿ ಮಗ ಶಿವಪ್ರಸಾದ್‌ಗೆ ತಿಳಿಸಿದ್ದರು.

ಜ.27ರಂದು ಶಿವಪ್ರಸಾದ್ ಕರೆ ಮಾಡಿದಾಗ ಸುಧಾಕರ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದು ಬಂದಿದೆ. ಇವರು ಈವರೆಗೆ ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News