ಉಡುಪಿ ಜಿಲ್ಲಾ ಮೀನುಗಾರರ ನಿಯೋಗದೊಂದಿಗೆ ಮೀನುಗಾರಿಕೆ ಸಚಿವರ ಸಭೆ

Update: 2023-10-12 14:43 GMT

ಉಡುಪಿ : ಉಡುಪಿ ಜಿಲ್ಲೆಯ ಮೀನುಗಾರರ ವಿವಿಧ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಬೆಂಗಳೂರಿನ ಕುಮಾರಕೃಪ ಅತಿಥಿಗೃಹದಲ್ಲಿ ಇಂದು ಮೀನುಗಾರಿಕೆ ಸಚಿವ ಮಾಂಕಾಳ ವೈದ್ಯರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚಿಸಲಾಯಿತು.

ಮಲ್ಪೆ ಮೀನುಗಾರರ ಸಂಘ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣರ ನೇತೃತ್ವದ ನಿಯೋಗ ಸಚಿವರ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಮೀನುಗಾರರ ಪ್ರಮುಖ ಬೇಡಿಕೆಗಳನ್ನು ಸಚಿವರ ಮುಂದೆ ಇರಿಸಿತು.

ಇವುಗಳಲ್ಲಿ ಯಾಂತ್ರಿಕ ದೋಣಿಗಳಿಗೆ ನೀಡುವ ಡೀಸೆಲ್ 500 ಲೀಟರಿಗೆ ಹೆಚ್ಚಳ ಹಾಗೂ ಡೀಸೆಲ್ ಕೋಟಾವನ್ನು ಮಾಸಿ ಕದ ಬದಲು ವಾರ್ಷಿಕ ಕೋಟಾ, ನಾಡದೋಣಿಗಳಿಗೆ ವರ್ಷಪೂರ್ತಿ ಸಮರ್ಪಕ ರೀತಿಯಲ್ಲಿ ಸೀಮೆಎಣ್ಣೆ ಪೂರೈಕೆ, ಪ್ರತಿವರ್ಷ ಬಂದರಿನ ಡ್ರೆಜ್ಜಿಂಗ್ ನಡೆಸಲು ಕ್ರಮ, ಹೊರವಲಯದಲ್ಲಿ ಬಂದರು ನಿರ್ಮಾಣ, ಸೀ ಆಂಬ್ಯುಲೆನ್ಸ್ ಮಂಜೂರು, ಅಂತರ್‌ರಾಜ್ಯ ಸಮನ್ವಯ ಸಮಿತಿ, ಬಂದರಿನ ಸುಗಮ ನಿರ್ವಹಣೆಯ ದೃಷ್ಟಿಯಿಂದ ಸ್ಥಳೀಯ ಸಂಘಸಂಸ್ಥೆಗೆ ನೀಡು ವುದು, ನಾಡದೋಣಿ ತಂಗುದಾಣ ನಿರ್ಮಾಣ, ಮಲ್ಟಿ ಪಾರ್ಕಿಂಗ್ ವ್ಯವಸ್ಥೆ, ಪರ್ಸಿನ್ ಸಂಘಕ್ಕೆ ಬಹು ಅಂತಸ್ತು ಕಟ್ಟಡ ನಿರ್ಮಾಣಕ್ಕೆ ಜಾಗ ಮಂಜೂರು, ಟೆಗ್ಮಾ ಕಂಪೆನಿಗೆ ನೀಡಿರುವ ನಿವೇಶನದ ಗುತ್ತಿಗೆ ಅವಧಿ ಮುಗಿದ ನಂತರ ಮೀನು ಗಾರಿಕೆ ಇಲಾಖೆಗೆ ಹಸ್ತಾಂತರ, ಮರದ ಬೋಟ್ ಮರು ನಿರ್ಮಾಣದ ಸಾಧ್ಯತಾ ಪ್ರಮಾಣ ಪತ್ರದ ಅವಧಿಯನ್ನು ಮರದ ಬೋಟಿಗೆ ೫ ವರ್ಷ ಹಾಗೂ ಸ್ಟೀಲ್ ಬೋಟಿಗೆ ೭ ವರ್ಷಕ್ಕೆ ಕಡಿತಗೊಳಿಸುವುದು, ನಾಡದೋಣಿಗಳಿಗೆ ಹೈಬ್ರಿಡ್ ಎಲೆಕ್ಟ್ರಿಕ್ ಇಂಜಿನ್ ಅಳವಡಿಕೆಯ ಬಗ್ಗೆ ಪ್ರಸ್ತಾಪಿಸಿ ಇಲಾಖೆ ಈ ಬಗ್ಗೆ ತಕ್ಷಣ ಕ್ರಮವಹಿಸುವ ಕುರಿತಂತೆ ಬೇಡಿಕೆಗಳನ್ನು ಇಲಾಖೆಯ ಮುಂದೆ ಇರಿಸಲಾಯಿತು.

ಸಭೆಯಲ್ಲಿ ಮೀನುಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಲ್ಮಾ ಫಾಹಿಮ್, ಇಲಾಖೆಯ ನಿರ್ದೇಶಕ ದಿನೇಶ್‌ ಕುಮಾರ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಮೀನುಗಾರ ಮುಖಂಡರಾದ ಸಂತೋಷ್ ಸಾಲ್ಯಾನ್, ಜಗನ್ನಾಥ, ರವಿ ಸುವರ್ಣ, ಆನಂದ ಖಾರ್ವಿ, ಯಶವಂತ ಗಂಗೊಳ್ಳಿ ಹಾಗೂ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News