ಬಂಗ್ಲೆಗುಡ್ಡೆಯಲ್ಲಿ ಮೀಲಾದ್ ಸಂದೇಶ ರ್‍ಯಾಲಿ

Update: 2024-09-16 06:19 GMT

ಕಾರ್ಕಳ: ಪ್ರವಾದಿ ಮುಹಮ್ಮದ್(ಸ)ರ ಜನ್ಮ ದಿನದ ಪ್ರಯುಕ್ತ ಬಂಗ್ಲೆಗುಡ್ಡೆ ಹಯಾತುಲ್ ಇಸ್ಲಾಂ ಅಸೋಸಿಯೇಶನ್, ಸಲ್ಮಾನ್ ಜುಮಾ ಮಸ್ಜಿದ್, ಸರ್ ಹಿಂದ್ ಅಕಾಡಮಿ, ತ್ವೈಬಾ ಗಾರ್ಡನ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಸೋಮವಾರ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಬಿ.ಆರ್.ಕೆ. ವೃತ್ತದಲ್ಲಿ ಮೀಲಾದ್ ಸಂದೇಶ ರ್‍ಯಾಲಿ ನಡೆಯಿತು.

ಸರ್ ಹಿಂದ್ ಇಸ್ಲಾಮಿಕ್ ಅಕಾಡಮಿ, ತ್ವೈಬಾ ಗಾರ್ಡನ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಅಹ್ಮದ್ ಶರೀಫ್ ಸಅದಿ ಸಂದೇಶ ಭಾಷಣ ಮಾಡಿದರು.

ಸರ್ ಹಿಂದ್ ಅಕಾಡಮಿ, ತ್ವೈಬಾ ಗಾರ್ಡನ್ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್, ಕರ್ನಾಟಕ ಮುಸ್ಲಿಮ್ ಜಮಾತ್ ಕಾರ್ಕಳ ತಾಲೂಕು ಅಧ್ಯಕ್ಷ ನಾಸಿರ್ ಶೇಖ್ ಬೈಲೂರು, ಜಲ್ವ ಏ ನೂರ್ ನ ಮೌಲಾನ ಸಹೀದ್ ರಝಾ, ಹಯಾತುಲ್ ಇಸ್ಲಾಂ ಅಸೋಸಿಯೇಶನ್, ಬಂಗ್ಲೆಗುಡ್ಡೆ ನ ಪ್ರಮುಖರಾದ ರಜ್ಜಬ್ ಎ.ಕೆ., ಮಾಜಿ ಅಧ್ಯಕ್ಷರಾದ ಬಶೀರ್ ಸಾಣೂರು, ಹನೀಫ್ ಬೆಲ್ಲೂರ್, ರಜಬ್ ಪರನಿರ್, ಮಾಜಿ ಉಪಾಧ್ಯಕ್ಷ ಕೆ ನೂರುದ್ದೀನ್, ಅಬ್ದುಲ್ ರಹಿಮಾನ್, ಸೇವಾದಳದ ಅಧ್ಯಕ್ಷ ಅಬ್ದುಲ್ಲಾ ಶೇಖ್, ಝೈನುಲ್ ಆಬಿದ್ ಸಖಾಫಿ ಮಾಗುಂಡಿ, ಅಬ್ದುಲ್ ಖಾದರ್ ಮದನಿ ಅಳಕೆ, ಮಹಮೂದ್ ಝುಹರಿ ಚೆರ್ಕಳ, ಅಶ್ಫಾಕ್ ಅಹ್ಮದ್ ಸಖಾಫಿ, ಶಮೀಮ್ ಸಅದಿ ಸುರತ್ಕಲ್, ಇಸ್ಮಾಯೀಲ್ ಮಾಸ್ಟರ್ ಕೊಣಾಜೆ, ಎಸ್.ವೈ.ಎಸ್ ಮುಖಂಡರಾದ ದಾವೂದ್ ಪರನಿರ್, ರಫೀಕ್, ಮುಬೀನ್, ಎಸ್ಸೆಸ್ಸೆಫ್ ಮುಖಂಡರಾದ ಅಲ್ತಾಫ್ ಪರನಿರ್, ನವಾಝ್ ಶರೀಫ್, ಫಯಾಝ್ ಪರನಿರ್, ಮಯ್ಯದಿ, ಕೆ.ಹಸನ್ ಮತ್ತಿತರರು ಉಪಸ್ಥಿತರಿದ್ದರು.

ಮೀಲಾದ್ ಪ್ರಯುಕ್ತ ಬಂಗ್ಲೆಗುಡ್ಡೆ ಸಲ್ಮಾನ್ ಜುಮಾ ಮಸೀದಿ ವಠಾರದಲ್ಲಿ ಕಾರ್ಯಕ್ರಮದಲ್ಲಿ ಹಿರಿಯ ದೀನಿ ವಿದ್ವಾಂಸ ಇಬ್ರಾಹೀಂ ಫೈಝಿ ಪುಲಿಕ್ಕೂರು ಧ್ವಜಾರೋಹಣ ನೆರವೇರಿಸಿದರು.

ಅಲವಿ ಫಝಲುಲ್ ಅಲ್ ಜಿಫ್ರಿ ತoಙಳ್ ಮೀಲಾದ್ ಸಂದೇಶ ರ್‍ಯಾಲಿಗೆ ಚಾಲನೆ ನೀಡಿದರು.

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News