ಮಿಯ್ಯಾರು ಲವ ಕುಶ ಜೋಡುಕೆರೆ ಕಂಬಳ

Update: 2025-03-15 12:00 IST
ಮಿಯ್ಯಾರು ಲವ ಕುಶ ಜೋಡುಕೆರೆ ಕಂಬಳ
  • whatsapp icon

ಕಾರ್ಕಳ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸೂಕ್ತ ರೂಪು ರೇಶೆ ತಯಾರಿಸಿ ಶಾಶ್ವತ ಪರಿಹಾರ ಕಂಡು ಅನುದಾನ ದೊರಕಿಸುವಲು ಪಕ್ಷ ಭೇದ ಮರೆತು ಶಾಸಕರುಗಳು ಅವಿರತ ಪ್ರಯತ್ನ ನಡೆಸಿದ ಹಿನ್ನಲೆಯಲ್ಲಿ ಜಾನಪದ ಕ್ರೀಡೆಗೆ 3.5 ಕೋಟಿ ರೂಪಾಯಿಯನ್ನು ರಾಜ್ಯ ಬಜೆಟ್ ನಲ್ಲಿ ಮೀಸಲಿಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ತಿಳಿಸಿದರು

ಕಾರ್ಕಳ ಮಿಯ್ಯಾರಿನಲ್ಲಿ ʼಮಿಯ್ಯಾರು ಕಂಬಳ ಸಮಿತಿ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರುʼ ಇದರ ಜಂಟಿ ಆಶ್ರಯ ನಡೆಯುತ್ತಿರುವ ಮಿಯ್ಯಾರು ಲವ ಕುಶ ಜೋಡುಕೆರೆ ಕಂಬಳದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು

ಕಂಬಳವನ್ನು ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಆರ್ಚಕರಾದ ಹರಿದಾಸ್ ಭಟ್ ಉಧ್ಘಾಟಿಸಿದರು. ಮಿಯ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸನ್ಮತಿ ನಾಯಕ್ ಅಧ್ಯಕ್ಷತೆ ವಹಿಸಿದ್ದರು

ಈ ಸಂದರ್ಭದಲ್ಲಿ ಮಾಜಿ ಸಚಿವ , ಶಾಸಕ ವಿ ಸುನಿಲ್ ಕುಮಾರ್, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು, ಕಂಬಳ ಸಮಿತಿ ಕಾರ್ಯದ್ಯಕ್ಷ ಜೀವನ್ ದಾಸ್ ಅಡ್ಯಂತಾಯ,

ಸಂಘಟನಾ ಕಾರ್ಯದರ್ಶಿ ಫ್ರೊ. ಗುಣಪಾಲ ಕಡಂಬ, ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಬಾಸ್ಕರ್ ಕೋಟ್ಯಾನ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರಸಭಾ ಸದಸ್ಯ ಶುಭದ ರಾವ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುಧಾಕರ್ ಶೆಟ್ಟಿ, ಸುನಿಲ್ ಕುಮಾರ್ ಬಜಗೋಳಿ, ಕೃಷ್ಣ ಶೆಟ್ಟಿ ಬಜಗೋಳಿ, ಅಂತೋನಿ ಡಿ‌ಸೋಜ ನಕ್ರೆ, ದಯಾನಂದ ಬಂಗೇರ, ಉದಯ ಎಸ್ ಕೋಟ್ಯಾನ್, ಉಮೇಶ್ ರಾವ್, ರವೀಂದ್ರ ಕುಮಾರ್, ಅವಿನಾಶ್ ಶೆಟ್ಟಿ, ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News