ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಪದಗ್ರಹಣ ಕಾರ್ಯಕ್ರಮ

Update: 2024-02-09 06:45 GMT

ಉಡುಪಿ, ಫೆ.8: ನಮ್ಮ ನಾಡ ಒಕ್ಕೂಟ (ಎನ್.ಎನ್.ಒ.) ಉಡುಪಿ ಜಿಲ್ಲೆಯ ವತಿಯಿಂದ ಉಡುಪಿ ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ಪದಗ್ರಹಣ ಮತ್ತು ವಕೀಲರು ಹಾಗೂ ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸನ್ಮಾನ, ಸಾಧಕರಿಗೆ ಗೌರವ ಕಾರ್ಯಕ್ರಮವು ಇತ್ತೀಚೆಗೆ ಉಡುಪಿಯ ಮಣಿಪಾಲ್ ಇನ್ ಹೋಟೆಲ್ ನಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿಯ ಅಧ್ಯಕ್ಷ ಮುಹಮ್ಮದ್ ಸಲೀಮ್, 2024-25ನೇ ಸಾಲಿಗೆ ಒಕ್ಕೂಟದ ಉಡುಪಿ ಜಿಲ್ಲಾಧ್ಯಕ್ಷರಾಗಿ ಪುನರ್ ಆಯ್ಕೆಗೊಂಡ ಬೆಳ್ವೆ ಮುಸ್ತಾಕ್ ಅಹ್ಮದ್ ರಿಗೆ ಅಧಿಕಾರ ಪತ್ರವನ್ನು ಹಸ್ತಾಂತರಿಸಿದರು. ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷರು ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳಿಗೆ ಹಾಗೂ ಸದಸ್ಯರುಗಳಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು.

ಈ ಕಾರ್ಯಕ್ರಮದಲ್ಲಿ ನಮ್ಮ ಸಮುದಾಯದ ಉಡುಪಿ ಜಿಲ್ಲೆಯ ವಕೀಲ ವೃತ್ತಿಯಲ್ಲಿ ತೊಡಗಿಕೊಂಡಂತಹ ಹಾಗೂ ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. 'ಎನ್.ಎನ್.ಒ. ಸೇವಾ" ಪ್ರಶಸ್ತಿಯನ್ನು ಎನ್.ಎನ್.ಒ. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹುಸೈನ್ ಹೈಕಾಡಿಯವರಿಗೆ ನೀಡಿ ಗೌರವಿಸಲಾಯಿತು. ಗಂಗೊಳ್ಳಿಯ ಮುಳುಗು ತಜ್ಞ ದಿನೇಶ್ ಖಾರ್ವಿ ಗಂಗೊಳ್ಳಿ, ಉದ್ಯಾವರದ ಶೈಖ್ ವಾಹಿದ್ ದಾವೂದ್, ನಿವೃತ್ತ ಕಮಾಂಡರ್ ಪಿ.ಎ.ಮೊಹಿದ್ದೀನ್, ಸಮಾಜ ಸೇವಕರಾದ ಉಡುಪಿಯ ಪೀರ್ ಮುಹಮ್ಮದ್, ಕುಂದಾಪುರದ ಎಸ್. ದಸ್ತಗೀರ್ ಅವರನ್ನು 'ಎನ್.ಎನ್.ಒ. ಸಮಾಜ ಸೇವಾ ಪ್ರಶಸ್ತಿ' ನೀಡಿ ಸನ್ಮಾನಿಸಲಾಯಿತು. ನಮ್ಮ ನಾಡ ಒಕ್ಕೂಟ ಟ್ರಸ್ಟ್ ನ ಎನ್.ಎಸ್.ಅಕಾಡಮಿ ಕಾರ್ಕಳ ಸಂಸ್ಥೆಗೆ ಕಟ್ಟಡವನ್ನು ನೀಡಿರುವ ದಾನಿ ಮೊಹ್ಸಿನ್ ಅಹ್ಮದ್ ಕಾರ್ಕಳ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಕೆ.ಅನ್ವರ್ ಬಾಷಾ, ಕೆಪಿಸಿಸಿ ಅಲ್ಪ ಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿಯಾದ ಮುಹಮ್ಮದ್ ಸಿರಾಜ್, 'ಎನ್.ಎನ್.ಒ. ಕೇಂದ್ರ ಸಮಿತಿಯ ಅಧ್ಯಕ್ಷ ಮುಹಮ್ಮದ್ ಸಲೀಂ, ಉಡುಪಿಯ ಹೋಟೆಲ್ ಮಣಿಪಾಲ್ ಇನ್ ಮಾಲಕ ಮೌಲಾನಾ ಇಬ್ರಾಹೀಂ ಗೋವಾ, 'ಎನ್.ಎನ್.ಒ. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಮುಹಮ್ಮದ್ ಹುಸೈನ್ ಕಾರ್ಕಳ, ಟ್ರಸ್ಟಿಗಳಾದ ಕೆ.ಎಸ್.ಎಂ.ಶಬ್ಬೀರ್ ಸಾಹೇಬ್, ಮುಹಮ್ಮದ್ ಅಲಿ ಉಚ್ಚಿಲ, ಮೊಹ್ಸಿನ್ ಅಹ್ಮದ್ ಕಾರ್ಕಳ, ಉಡುಪಿ ಜಿಲ್ಲೆಯ ನೂತನ ಪದಾಧಿಕಾರಿಗಳಾದ ಗಂಗೊಳ್ಳಿ ಮುಹಮ್ಮದ್ ರಫೀಕ್ - ಜಿಲ್ಲಾ ಗೌರವ ಅಧ್ಯಕ್ಷ, ಝಹೀರ್ ನಾಖುದಾ ಗಂಗೊಳ್ಳಿ - ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಶೈಖ್ ವಾಹಿದ್ ದಾವೂದ್ - ಜಿಲ್ಲಾ ಸಂಯೋಜಕರು, ಮುಹಮ್ಮದ್ ಸುಹಾನ್ ಸಾಸ್ತಾನ - ಜಿಲ್ಲಾ ಸಂಘಟನಾ ಕಾರ್ಯದರ್ಶಿ, ನಕ್ವಾ ಯಹ್ಯಾ ಮಲ್ಪೆ - ಜಿಲ್ಲಾ ಖಜಾಂಚಿ, ಹಝ್ಮತ್ ಅಬ್ದುಲ್ ರಹಿಮಾನ್ ಹೆಜಮಾಡಿ - ಜಿಲ್ಲಾ ಕಾನೂನು ಸಲಹೆಗಾರರು, ಟಿ.ಎಂ.ಝಫ್ರುಲ್ಲಾಹ್ ಸಾಹೇಬ್ - ಜಿಲ್ಲಾ ಕ್ರೀಡಾ ಸಂಯೋಜಕರು, ಮುಹಮ್ಮದ್ ಅರಫಾತ್ ಬೆಳ್ವೆ - ಜಿಲ್ಲಾ ಯುವ ಸಂಘಟನೆಯ ಅಧ್ಯಕ್ಷರು, ಅಬ್ದುಲ್ ಖಾದರ್ - ಜಿಲ್ಲಾ ಯುವ ಸಂಯೋಜಕರು, ನಝೀರ್ ಸಾಹೇಬ್ ನೇಜಾರ್ - ಉಡುಪಿ ತಾಲೂಕು ಅಧ್ಯಕ್ಷರು, ಎಸ್. ದಸ್ತಗೀರ್ ಸಾಹೇಬ್ - ಕುಂದಾಪುರ ತಾಲೂಕು ಅಧ್ಯಕ್ಷರು, ಮಾಮ್ಬ್ಡ್ ಇಬ್ರಾಹೀಂ ಶಿರೂರು - ಬೈಂದೂರು ತಾಲೂಕು ಉಪಾಧ್ಯಕ್ಷರು, ಮುಹಮ್ಮದ್ ಅನ್ಸಾರ್ - ಹೆಬ್ರಿ ತಾಲೂಕು ಉಪಾಧ್ಯಕ್ಷರು, ತಾಜುದ್ದೀನ್ ಇಬ್ರಾಹೀಂ - ಬ್ರಹ್ಮಾವರ ತಾಲೂಕು ಅಧ್ಯಕ್ಷರು, ಅಶ್ರಫ್ - ಕಾಪು ತಾಲೂಕು ಅಧ್ಯಕ್ಷರು ಹಾಗೂ ಶಾಕೀರ್ ಹುಸೈನ್ - ಕಾರ್ಕಳ ತಾಲೂಕು ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೆಳ್ವೆ ಜುಮಾ ಮಸೀದಿಯ ಖತೀಬ್ ಮೌಲಾನ ಮುಹಮ್ಮದ್ ರಫೀಕ್ ಬೆಳ್ವೆ ಕಿರಾಅತ್ ಪಠಿಸಿ ಪ್ರಾರ್ಥಿಸಿದರು. ಹುಸೈನ್ ಹೈಕಾಡಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು, ಮುಶ್ತಾಕ್ ಹೆನ್ನಾಬೈಲ್ ಸನ್ಮಾನ ಪತ್ರವನ್ನು ವಾಚಿಸಿದರು. ಕುಂದಾಪುರ ತಾಲೂಕು ಸಮಿತಿಯ ಸದಸ್ಯರಾದ ಉಸ್ಮಾನ್ ಪಳ್ಳಿ ಹಾಗೂ ಕುಂದಾಪುರ ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಫಝಲ್ ಕಾರ್ಯಕ್ರಮ ನಿರೂಪಿಸಿದರು. ನಿಹಾರ್ ಅಹ್ಮದ್ ಕುಂದಾಪುರ ಹಾಗೂ ಝಹೀರ್ ನಾಖುದಾ ಗಂಗೊಳ್ಳಿ ಸಹಕರಿಸಿದರು. ಜಿಲ್ಲಾ ಉಪಾಧ್ಯಕ್ಷ ಅಬು ಮೊಹಮ್ಮದ್ ಮುಝಾವರ್ ವಂದಿಸಿದರು.

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News