ಹಸಮಣೆಯೇರಿದ ಕುಂದಾಪುರದ ಯುವಕ, ಜರ್ಮನಿಯ ಯುವತಿ

Update: 2024-01-03 08:23 GMT

ಕುಂದಾಪುರ, ಜ.3: ಕುಂದಾಪುರ ತಾಲೂಕಿನ ಆಜ್ರಿ ಮೂಲದ ಯುವಕ ಮತ್ತು ಜರ್ಮನಿಯ ಯುವತಿಯ ವಿವಾಹವೂ ಹಿಂದೂ ಸಂಪ್ರದಾಯದಂತೆ ಜ.1ರಂದು ನೆರವೇರಿತು.

ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಇವರು ಹಸೆಮಸೆ ಏರಿದ್ದು ಎರಡೂ ಕುಟುಂಬಗಳ ಹಿರಿಯರು ಮದುವೆಗೆ ಸಾಕ್ಷಿಯಾದರು.

ಕುಂದಾಪುರ ತಾಲೂಕಿನ ಗ್ರಾಮೀಣ ಭಾಗವಾದ ಆಜ್ರಿಯ ಕರಿಮನೆ ಸುವರ್ಣ ಮತ್ತು ಪಂಜು ಪೂಜಾರಿ ದಂಪತಿಯ ಪುತ್ರ ಚಂದನ್ ಹಾಗೂ ಜರ್ಮನಿಯ ಪೆಟ್ರ ಶ್ರೂಆರ್ ಮತ್ತು ಪೀಟರ್ ಶ್ರೂಆರ್ ಮುನಿಸ್ತರ್ ಯುನಿಕಬ್ ದಂಪತಿಯ ಪುತ್ರಿ ಕಾರಿನ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವ ಜೋಡಿ.

ಚಂದನ್ ಅವರು ಜರ್ಮನಿಯಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಶಿಕ್ಷಕಿಯಾಗಿರುವ ಕಾರಿನ್ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರು ತಮ್ಮ ಪ್ರೇಮದ ಬಗ್ಗೆ ತಮ್ಮ ಕುಟುಂಬಿಕರೊಂದಿಗೆ ಮಾತುಕತೆ ಮಾಡಿದ್ದು ಎರಡು ಕುಟುಂಬಗಳು ಪರಸ್ಪರ ಚರ್ಚಿಸಿ ಮದುವೆಗೆ ಸಮ್ಮತಿಸಿದ್ದರು. ಅದರಂತೆ ಇವರ ವಿವಾಹ ನೆರವೇರಿದ್ದು, ಎರಡು ಕಡೆಯ ಬಂಧು-ಮಿತ್ರರು, ಹಿತೈಷಿಗಳು ಪಾಲ್ಗೊಂಡು ನವಜೋಡಿಗಳಿಗೆ ಶುಭಹಾರೈಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News