ಸಮುದ್ರ ಮಧ್ಯೆ ಬೋಟಿನಲ್ಲಿ ಕುಸಿದು ಬಿದ್ದು ವ್ಯಕ್ತಿ ಮೃತ್ಯು

Update: 2024-02-12 15:41 GMT

ಮಲ್ಪೆ, ಫೆ.12: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟಿನಲ್ಲಿ ಮೀನುಗಾರರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಫೆ.12ರಂದು ಬೆಳಗಿನ ಜಾವ ನಡೆದಿದೆ.

ಮೃತರನ್ನು ಬೋಟಿನ ಕಲಾಸಿ ಮ್ಯಾಥೀವ್(52) ಎಂದು ಗುರುತಿಲಾಗಿದೆ.

ಇವರು ಯಮುನ ಮಾಲಕತ್ವದ ಶ್ರೀಮಹಾಲಕ್ಷ್ಮೀ ಬೋಟಿನಲ್ಲಿ ಇತರ ಮೀನುಗಾರ ರೊಂದಿಗೆ ಫೆ.10ರಂದು ಮೀನುಗಾರಿಕೆ ಗಾಗಿ ಸಮುದ್ರದಲ್ಲಿ ತೆರಳಿದ್ದು, 27 ನಾಟಿಕಲ್ ದೂರದ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವ ವೇಳೆ ಮ್ಯಾಥೀವ್ ಬೋಟಿನಲ್ಲಿಯೇ ಕುಸಿದು ಬಿದ್ದರು. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ಮಲ್ಪೆಬಂದರಿಗೆ ಬಂದು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News