ಉಡುಪಿ ಜಿಲ್ಲಾಮಟ್ಟದ ಎನ್‌ಸಿಸಿ ಸ್ಪರ್ಧೆ: ಪಿಪಿಸಿಗೆ ಸಮಗ್ರ ಪ್ರಶಸ್ತಿ

Update: 2024-04-03 12:19 GMT

ಉಡುಪಿ: ಎಂಜಿಎಂ ಕಾಲೇಜಿನ ಎನ್‌ಸಿಸಿ ಆರ್ಮಿ ವಿಂಗ್‌ನ ಬೆಳ್ಳಿ ಹಬ್ಬದ ಪ್ರಯುಕ್ತ ಉಡುಪಿ ಜಿಲ್ಲೆಯ ಕಾಲೇಜುಗಳ ಎನ್‌ಸಿಸಿ ಆರ್ಮಿ ಕಾಡೆಟ್ಸ್‌ಗಳಿಗೆ ವಿವಿಧ ಸ್ಪರ್ಧೆಗಳನ್ನು ಇತ್ತೀಚೆಗೆ ಎಂಜಿಎಂ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.

ಸ್ಪರ್ಧೆಯನ್ನು ಉದ್ಘಾಟಿಸಿದ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿ ಸಿಎ ಬಿ.ಪಿ.ವರದರಾಯ ಪೈ ಮಾತನಾಡಿ, ಎನ್‌ಸಿಸಿಯು ಜೀವನದಲ್ಲಿ ಶಿಸ್ತು, ಧೈರ್ಯ ಹಾಗೂ ವ್ಯಕ್ತಿತ್ವವನ್ನು ಬೆಳಸಲು ಸಹಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಸುಮಾರು ಎಂಟು ಕಾಲೇಜುಗಳ ಎನ್‌ಸಿಸಿ ಆರ್ಮಿ ಕೆಡೆಟ್‌ಗಳು ಡ್ರಿಲ್, ಸಾಂಸ್ಕೃತಿಕ ಸ್ಪರ್ಧೆ, ಚರ್ಚಾ ಸ್ಪರ್ಧೆ ಹಾಗೂ ಬೆಸ್ಟ್ ಕೆಡೆಟ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಸ್ಪರ್ಧೆಗಳಲ್ಲಿ ವಿಜೇತರಾದ ಕೆಡೆಟ್‌ಗಳಿಗೆ ಸಮಾರಂಭದಲ್ಲಿ ಬಹುಮಾನಗಳನ್ನು ನೀಡಲಾಯಿತು.

ನಿವೃತ್ತ ಆರ್ಮಿ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಎಂ.ಕೃಷ್ಣ ಶೆಟ್ಟಿ, ಶಿರ್ವ ಸೈಂಟ್ ಮೇರೀಸ್ ಕಾಲೇಜಿನ ಮಾಜಿ ಅಸೋಸಿ ಯೇಟ್ ಎನ್‌ಸಿಸಿ ಆಫೀಸರ್ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷೀ ನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಸಮಗ್ರ ಮತ್ತು ಎಂ.ಐ.ಟಿ ಮಣಿಪಾಲ ರನ್ನರ್ ಆಫ್ ಸ್ಥಾನ ಪಡೆದುಕೊಂಡಿತು. ಕಾಲೇಜಿನ ಎನ್‌ಸಿಸಿ ಆರ್ಮಿ ಅಧಿಕಾರಿ ಕ್ಯಾಪ್ಟನ್ ನವ್ಯಾ ಮೊದಲಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News