ಲೋಕಸಭಾ ಚುನಾವಣೆ: ಪೊಲೀಸ್ ವೀಕ್ಷಕರ ನೇಮಕ

Update: 2024-04-03 14:43 GMT

ಉಡುಪಿ: 1996 ಬ್ಯಾಚ್‌ನ ರಾಜಸ್ತಾನ ಕೇಡರ್‌ನ ಐಪಿಎಸ್ ಅಧಿಕಾರಿ ಬಿನಿತಾ ಠಾಕೂರ್ ಅವರನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪೊಲೀಸ್ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.

ರಾಜಸ್ತಾನದ ಉದಯಪುರ ರೇಂಜ್‌ನ ಐಜಿಪಿ ಆಗಿರುವ ಬಿನಿತಾ ಠಾಕೂರ್ ಅವರು ಬನ್ನಂಜೆಯ ಪ್ರವಾಸಿ ಮಂದಿರದಲ್ಲಿ ತೆರೆಯಲಾಗಿರುವ ಪೊಲೀಸ್ ವೀಕ್ಷಕರ ಕಚೇರಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಚುನಾವಣೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಅವರನ್ನು ದೂರವಾಣಿ ಸಂಖ್ಯೆ: 0820-2001206, ಮೊ.ನಂ:9482214760ರ ಮೂಲಕ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News