ಏರ್‌ಟೆಲ್ ಟವರ್‌ನ ಬಿಡಿಭಾಗ ಕಳವು

Update: 2024-04-12 15:58 GMT

ಕಾರ್ಕಳ, ಎ.12: ಕಾಬೆಟ್ಟು ಶೀತಲ್ ಬಾರ್ ಹಿಂಭಾಗದಲ್ಲಿ ಏರ್‌ಟೆಲ್ ಕಂಪೆನಿಯ ಟವರ್‌ನ ಲಕ್ಷಾಂತರ ರೂ. ಮೌಲ್ಯದ ಬಿಡಿಭಾಗಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಎ.9ರಂದು ಟವರ್‌ನಲ್ಲಿ ಅಳವಡಿಸಿದ್ದ ಏರ್‌ಟೆಲ್ ಕಂಪೆನಿ ಮಾಲಕತ್ವದ ಎರಿಕ್ಸನ್ ಕಂಪೆನಿಯ ಬಿಡಿಭಾಗವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಇದರ ಮೌಲ್ಯ 1,83,600ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News