ಸಾಲಿಗ್ರಾಮ: ಮತದಾನ ಕೇಂದ್ರಕ್ಕೆ ತೆರಳಲು ವಿಶೇಷ ಚೇತನರಿಗೆ, ಹಿರಿಯ ನಾಗರಿಕರಿಗೆ ಉಚಿತ ವಾಹನ ವ್ಯವಸ್ಥೆ

Update: 2024-04-24 15:10 GMT

ಉಡುಪಿ, ಎ.24: ಉಡುಪಿ-ಚಿಕ್ಕಮಗಳೂರು ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಎ.26ರಂದು ಮತದಾನ ನಡೆಯಲಿದ್ದು, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿಶೇಷ ಚೇತನರು, ಅಶಕ್ತರು ಮತ್ತು ಹಿರಿಯ ನಾಗರೀಕರು (75 ವರ್ಷ ಮೇಲ್ಪಟ್ಟವರಿಗೆ) ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾುಸಲು ಅನುಕೂಲವಾಗುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ಉಚಿತ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಬಗ್ಗೆ ವಾಹನ ಸೌಲಭ್ಯ ಪಡೆಯಲು ಮೊಬೈಲ್ ಸಂಖ್ಯೆ: 9845436753 ಮತ್ತು 9902460052 ಅನ್ನು ಸಂಪರ್ಕಿಸಿ, ಸದ್ರಿ ವಾಹನ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News