ಉಡುಪಿ: ಬಸ್ಸುಗಳು ನಿಗದಿತ ಮಾರ್ಗದಲ್ಲಿ ಸಂಚರಿಸಲು ಸೂಚನೆ

Update: 2024-05-15 13:58 GMT

ಉಡುಪಿ, ಮೇ15:ಸಂತೆಕಟ್ಟೆಯಿಂದ ಉಡುಪಿ ಕಡೆಗೆ ಬರುವ ಕೆಲವೊಂದು ಬಸ್ಸಿನ ಪರವಾನಿಗೆಯಲ್ಲಿ ನಿಟ್ಟೂರು-ರಾ.ಹೆ.17 ಎಂದು ನಮೂದಿಸಿರುವ ಬಸ್ಸುಗಳು ಅಂಬಾಗಿಲು ರಾ.ಹೆ.66 ಕರಾವಳಿ ಬೈಪಾಸಿನಿಂದ ಅಂಬಲಪಾಡಿ ಬೈಪಾಸ್-ಬ್ರಹ್ಮಗಿರಿ-ಅಜ್ಜರಕಾಡು-ತಾಲೂಕು ಕಛೇರಿ ಮೂಲಕ ಹಾಗೂ ಉಳಿದ ಸಿಟಿ ಬಸ್ಸುಗಳು ಅಂಬಾಗಿಲು ತಾಂಗದಗಡಿ-ಗುಂಡಿಬೈಲು ಮೂಲಕ ಕಲ್ಸಂಕಕ್ಕೆ ಬಂದು ಬೃಂದಾವನ ಹೋಟೆಲ್ ಬಳಿ ಎಡಕ್ಕೆ ತಿರುಗಿ ಕಾಫಿಯ ಹೋಟೆಲ್ ಬಳಿ ಬಲಕ್ಕೆ ತಿರುಗಿ ಸಿಟಿ ಬಸ್ಸು ನಿಲ್ದಾಣಕ್ಕೆ ತಲುಪುವಂತೆ ಸಂಚರಿಸಬೇಕು.

ಅದೇ ರೀತಿ ಬಾರ್ಕೂರು- ಬ್ರಹ್ಮಾವರ- ಹೊನ್ನಾಳ- ಹೆಬ್ರಿ- ಪೆರ್ಡೂರು- ಕುಕ್ಕೆಹಳ್ಳಿ ಹಾಗೂ ಇತರೆ ಕಡೆಯಿಂದ ಬರುವ ಶಟಲ್ ಸರ್ವಿಸ್ ಬಸ್ಸುಗಳು ಅಂಬಾಗಿಲು ಗುಂಡಿಬೈಲು ಮೂಲಕ ಕಲ್ಸಂಕಕ್ಕೆ ಬಂದು ಉಡುಪಿ ಬಸ್ಸು ನಿಲ್ದಾಣ ಪ್ರವೇಶಿಸು ವಂತೆ ಜಿಲ್ಲಾ ದಂಡಾಧಿಕಾರಿ ಈಗಾಗಲೇ ಅಧಿಸೂಚನೆ ಹೊರಡಿಸಿದ್ದರೂ ಸಹ ಅಂಬಾಗಿಲು- ಕಲ್ಸಂಕ ಮಾರ್ಗದಲ್ಲಿ ಬಸ್ಸುಗಳು ಸಂಚರಿಸದಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬಂದಿವೆ.

ಆದ್ದರಿಂದ ಮೇಲೆ ತಿಳಇಸಿದ ಎಲ್ಲಾ ಬಸ್ಸುಗಳು ಕಡ್ಡಾಯವಾಗಿ ಅಂಬಾಗಿಲು- ಗುಂಡಿಬೈಲು-ಕಲ್ಸಂಕ ಮಾರ್ಗವಾಗಿ ಉಡುಪಿ ಬಸ್ಸು ನಿಲ್ದಾಣ ತಲುಪಲು ಎಲ್ಲಾ ಬಸ್ಸು ಮಾಲಕರು ಕ್ರಮವಹಿಸಬೇಕು. ತಪ್ಪಿದಲ್ಲಿ ಮುಂದಿನ ಕಾನೂನು ಕ್ರಮಕೈಗೊಳ್ಳಲಾ ಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News