ಉಡುಪಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ಸಮಾವೇಶ

Update: 2024-05-15 15:07 GMT

ಉಡುಪಿ, ಮೇ15: ದ್ವಿತೀಯ ಪಿಯುಸಿ ಮುಗಿಸಿದ ವಿದ್ಯಾಪೋಷಕ್‌ನ 220 ವಿದ್ಯಾರ್ಥಿಗಳ ಒಂದು ದಿನದ ಶೈಕ್ಷಣಿಕ ಸಮಾವೇಶ ಯಕ್ಷಗಾನ ಕಲಾರಂಗದ ನೂತನ ಕಟ್ಟಡ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್ಮೆಂಟ್ ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್ (ಐವೈಸಿ)ನಲ್ಲಿ ಸೋಮವಾರ ಜರುಗಿತು.

ಹುಬ್ಬಳ್ಳಿಯ ಮೈಲೈಫ್ ಸಂಸ್ಥಾಪಕ ಪ್ರವೀಣ್ ವಿ. ಗುಡಿ ಪ್ರೇರಕರಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸಿಇಟಿ ಬರೆದ ಇಂಜಿನಿಯರಿಂಗ್ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಡಾ. ಶ್ರುತಕೀರ್ತಿರಾಜ್ ವಿಸ್ತೃತವಾದ ಮಾಹಿತಿ ನೀಡಿದರು.

ಲೆಕ್ಕಪರಿಶೋಧಕ ವಿಭಾಗದಲ್ಲಿ ಅಧ್ಯಯನ ಮಾಡಲಿರುವ ವಾಣಿಜ್ಯದ ವಿದ್ಯಾರ್ಥಿಗಳಿಗೆ ತ್ರಿಷಾ ಸಂಜೆ ಕಾಲೇಜಿನ ಪ್ರಾಂಶು ಪಾಲರಾದ ವಿಘ್ನೇಶ್ ಶೆಣೈ ಮಾರ್ಗದರ್ಶನ ನೀಡಿದರು. ಬ್ಯಾಂಕುಗಳಲ್ಲಿ ಶೈಕ್ಷಣಿಕ ಸಾಲ ಪಡೆಯುವಾಗ ಅನುಸರಿಸ ಬೇಕಾದ ಹಲವು ವಿಚಾರಗಳ ಬಗ್ಗೆ ಕೆನರಾ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ವಿನಯ್ ಕುಮಾರ್ ಮಾಹಿತಿ ನೀಡಿದರು.

ಕಾರ್ಯದರ್ಶಿ ಮುರಲಿ ಕಡೆಕಾರ್, ಜೊತೆ ಕಾರ್ಯದರ್ಶಿಗಳಾದ ನಾರಾಯಣ ಎಂ.ಹೆಗಡೆ ಹಾಗೂ ಹೆಚ್. ಎನ್. ಶೃಂಗೇಶ್ವರ ಸಮಾವೇಶವನ್ನು ಸಂಯೋಜಿಸಿದರು. ವಿದ್ಯಾಪ್ರಸಾದ್ ಮತ್ತು ವಿಜಯ ಕುಮಾರ್ ಮುದ್ರಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News