ಯುನಿಕೋರ್ಟ್ ಕೋಡ್ ಫೆಸ್ಟ್ ಕಾರ್ಯಾಗಾರ

Update: 2024-05-16 13:26 GMT

ಶಿರ್ವ, ಮೇ 16: ಮಂಗಳೂರು ಇನ್ಫೋಟೆಕ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್‌ನ ಅಂಗ ಸಂಸ್ಥೆಯಾದ ಯುನಿಕೋರ್ಟ್ ವತಿಯಿಂದ ಕೋಡ್ ಫೆಸ್ಟ್ ಕಾರ್ಯಾಗಾರ ಮತ್ತು ಸ್ಪರ್ಧೆಯನ್ನು ಬುಧವಾರ ಬಂಟಕಲ್ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಯುನಿಕೋರ್ಟ್‌ನ ಮಾನವ ಸಂಪನ್ಮೂಲ ಅಧಿಕಾರಿ ಚಂದ್ರಾಣಿ ಮತ್ತು ತಂಡದವರು ನಡೆಸಿಕೊಟ್ಟರು. ಈ ಸ್ಪರ್ಧೆಯಲ್ಲಿ ಒಟ್ಟು 174 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೋಡ್ ಫೆಸ್ಟ್‌ನ ಇಂದಿನ ಸ್ಪರ್ಧೆಯಲ್ಲಿ ಪ್ರತೀ ತಂಡದಲ್ಲಿ ಮೂವರು ವಿದ್ಯಾರ್ಥಿಗಳಂತೆ 29 ತಂಡಗಳನ್ನು ಮುಂದಿನ ಐದು ಕಾರ್ಯಾಗಾರಗಳಿಗೆ ಆಯ್ಕೆ ಮಾಡಲಾಯಿತು. ಕಾರ್ಯಾಗಾರದಲ್ಲಿ ವಿಜೇತರಾದ ಎರಡು ತಂಡಗಳಿಗೆ ತಲಾ 15ಸಾವಿರ ರೂ. ನಗದು ಬಹುಮಾನವನ್ನು ಯುನಿ ಕೋರ್ಟ್ ವತಿಯಿಂದ ನೀಡಿ ಗೌರವಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಕಯಂತ್ರ ವಿಭಾಗದ ವಿದ್ಯಾರ್ಥಿನಿ ಕಾತ್ಯಾಯಿನಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಉದ್ಯೋಗ ಮತ್ತು ತರಬೇತಿ ಅಧಿಕಾರಿ ಡಾ.ಸಿ.ಕೆ. ಮಂಜುನಾಥ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News