ಹೊನ್ನಾಳ: ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

Update: 2024-06-11 12:53 GMT

ಬ್ರಹ್ಮಾವರ: ಕರ್ನಾಟಕ ಮುಸ್ಲಿಂ ಜಮಾಅತ್ ಹೊನ್ನಾಳ ಶಾಖೆ ನೇತೃತ್ವದಲ್ಲಿ ಸುನ್ನಿ ಸ್ಟುಡೆಂಟ್ಸ್ ಫೇಡರೇಶನ್ ಹೊನ್ನಾಳ ಘಟಕದ ವತಿಯಿಂದ ಹೊನ್ನಾಳ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸತತ 17ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ಮಂಗಳವಾರ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಮುಸ್ಲಿಂ ಜಮಾಅತ್ತ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾನ್ ಅಹ್ಮದ್ ಹೊನ್ನಾಳ ಮಾತ ನಾಡಿ, ವಿದ್ಯೆಯನ್ನು ಕಲಿತು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೋಡಗಿಸಿ ಕೊಳ್ಳುವ ಉದ್ದೇಶದಿಂದವಿದ್ಯಾರ್ಥಿಗಳು ಶಾಲೆಗೆ ಬಂದರೆ ಮಾತ್ರ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ ಮತ್ತು ವಿದ್ಯೆ ಕಲಿಸಿದ ಗುರುಗಳ ಶ್ರಮಕ್ಕೂ ದಾನಿಗಳು ನೀಡಿದ ನೆರವಿಗೆ ಬೆಲೆ ಬರಲೂ ಸಾಧ್ಯ ಎಂದರು.

ಹೊನ್ನಾಳ ಜಾಮಿಯ ಮಸೀದಿ ಅಧ್ಯಕ್ಷ ಬಿ.ಮುಹಮ್ಮದ್ ರಫೀಕ್, ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಸುರೇಶ್ ಪೂಜಾರಿ ಹೊನ್ನಾಳ, ಉರ್ದು ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ಟೀಚರ್ ಶುಭ ಹಾರೈಸಿದರು.

ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಮುಹಮ್ಮದ್ ಗೌಸ್, ಜಾಮಿಯ ಮಸೀದಿಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಸುಭಾನ್ ಅಹ್ಮದ್, ಕಾರ್ಯ ದರ್ಶಿ ಝಿಯಾವುಲ್ಲಾ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಮುಝಮ್ಮಿಲ್, ಎಸ್.ಎಸ್.ಎಫ್ ಕಾರ್ಯದರ್ಶಿ ಬಿ.ಎಸ್.ಸೆಹರಾನ್, ಮುಹಮ್ಮದ್ ಸೈರಾಜ್, ಮುಹಮ್ಮದ್ ಅರ್ಮಾನ್, ರಿಯಾಜ್ ಮುಖ್ಯ ಅತಿಥಿಗಳಾಗಿದ್ದರು.

ಶಾಲಾ ಶಿಕ್ಷಕಿಯರಾದ ಮಮತಾ, ಶಾಹಿದಾ, ಮಾಲತಿ, ಶ್ವೇತಾ, ಆಫಿಯಾ, ಅಶ್ಮೀತಾ, ಶಾಲಾ ಹಳೆ ವಿದ್ಯಾರ್ಥಿಗಳು. ಶಾಲಾ ಮಕ್ಕಳು ಭಾಗವಹಿಸಿದ್ದರು. ಸುಮಾರು ೨೫ ಸಾವಿರ ರೂ. ಮೌಲ್ಯದ ಪುಸ್ತಕಗಳನ್ನು ವಿತರಿಸಲಾಯಿತು. ಎಸ್.ಎಸ್.ಎಫ್. ಪ್ರಮುಖ ಮುಹಮ್ಮದ್ ಇಮ್ತಿಯಾಝ್ ಹೊನ್ನಾಳ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News