ಧರ್ಮದ ಹೆಸರಿನಲ್ಲಿ ವೈಷಮ್ಯ ಬಿತ್ತಿದರೆ ಸಮಾಜದಲ್ಲಿ ಒಡಕು: ನಿರ್ಮಲ್ ಕುಮಾರ್ ಹೆಗ್ಡೆ

Update: 2024-09-22 13:09 GMT

ಕಾಪು, ಸೆ.22: ಧರ್ಮದ ಹೆಸರಿನಲ್ಲಿ ವೈಷಮ್ಯವನ್ನು ಬಿತ್ತಿದರೆ ಸಮಾಜದಲ್ಲಿ ಒಡಕು ಹುಟ್ಟುತ್ತದೆ. ಅದಕ್ಕೆ ನಾವು ಅವಕಾಶ ಮಾಡಿ ಕೊಡಬಾರದು ಎಂದು ಕರಂದಾಡಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಹೇಳಿದ್ದಾರೆ.

ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ವತಿಯಿಂದ ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಸೀರತ್ ಅಭಿಯಾನದ ಅಂಗವಾಗಿ ಕಾಪು ಹೋಟೆಲ್ ಕೆಒನ್ ಸಭಾಂಗಣದಲ್ಲಿ ಶನಿವಾರ ನಡೆದ ಪ್ರವಾದಿ ಮುಹಮ್ಮದ್ ಸ. ಲೇಖನ ಸಂಕಲನ ಪುಸ್ತಕ ಬಿಡುಗಡೆಯ ವಿಚಾರ ಮಂಡನೆಯ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಯಾವ ವ್ಯಕ್ತಿ ಚಾರಿತ್ರ್ಯವಂತನಾಗಿರುತ್ತನೋ, ಅವರ ವ್ಯಕ್ತಿತ್ವ ಉನ್ನತ ಮಟ್ಟದಲ್ಲಿ ಇರುತ್ತದೆ. 1500 ವರ್ಷಗಳ ಹಿಂದೆ ಅರೇಬಿಯಾದಲ್ಲಿ, ಪ್ರವಾದಿಯಾಗಿ ಮುಹಮ್ಮದ್‌ರವರು ನಿಯುಕ್ತಿಗೊಂಡು ಬಾಳಿ, ಬದುಕಿ, ಜನರನ್ನು ಅಂಧಕಾರ ದಿಂದ ಬೆಳಕಿಗೆ ತಂದು ಸಮಾಜದ ಜನರ ಬದುಕನ್ನು ಬದಲಾಯಿಸಿದ ಕೀರ್ತಿ ಮತ್ತು ಹೆಸರು ಇಂದಿನ ತನಕವೂ ಅಜರಾಮರ ವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಮಣಿಪಾಲ ಎಂಐಟಿಯ ಅಸೋಸಿಯೇಟ್ ಡಾ.ಜಮಾಲುದ್ದಿನ್ ಹಿಂದಿ ಮಾತನಾಡಿ, ಇಂದು ಸಮಾ ಜದಲ್ಲಿ ಕೆಡುಕು ಹರಡಲು ಯಾವುದೇ ಕಷ್ಟವಿಲ್ಲ. ಮೊಬೈಲ್ ಹಿಡಿದು ಒಂದು ಕ್ಲಿಕ್ ಮಾಡಿದರೆ ಸಾಕು, ಕೆಡುಕುಗಳ ಮಹಾ ಪೂರವೇ ಇಳಿಯುತ್ತದೆ. ಇದಕ್ಕೆ ತಡೆ ಒಡ್ಡ ಬೇಕಾದರೆ, ಪ್ರವಾದಿಯವರ ಬದುಕನ್ನು ಅಧ್ಯಯನ ಮಾಡಿ ಅದರಂತೆ ಬದುಕ ಬೇಕು. ಇದು ಇಂದಿನ ಕಾಲದ ಬೇಡಿಕೆ ಆಗಿರುತ್ತದೆ ಎಂದರು.

ಜಮೀಯತುಲ್ ಫಲಾಹ್ ಕಾಪು ಘಟಕದ ಅಧ್ಯಕ್ಷ ಶಬೀಹ್ ಅಹಮದ್ ಕಾಝೀ ಪ್ರವಾದಿ ಮುಹಮ್ಮದ್(ಸ)ರ ಲೇಖನ ಸಂಕಲನ ಬಿಡುಗಡೆ ಗೊಳಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಜಿಲ್ಲಾ ಸಂಚಾಲಕ ಡಾ.ಅಬ್ದುಲ್ ಅಝೀಝ್ ಸಮಾರೋಪ ಮಾತನಾಡಿದರು.

ಮುಹಮ್ಮದ್ ರಾಯಿಫ್ ಕುರಾನ್ ಪಠಿಸಿದರು. ಮುಹಮ್ಮದ್ ಮುಯೀಸ್ ಸ್ವಾಗತಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ಅಧ್ಯಕ್ಷ ಅನ್ವರ್ ಅಲಿ ಕಾಪು ಪ್ರಾಸ್ತಾವಿಕವಾಗಿ ಮಾತ ನಾಡಿದರು. ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಸಾಹೇಬ್ ವಂದಿಸಿದರು. ಅಬ್ದುಲ್ ಖಾಲಿದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News