ಮಾರ್ಪಳ್ಳಿ: ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ

Update: 2024-09-22 13:59 GMT

ಉಡುಪಿ ಸೆ.22: ಕುಕ್ಕಿಕಟ್ಟೆ ಮಾರ್ಪಳ್ಳಿ ಅಯ್ಯಪ್ಪ ಸ್ವಾಮಿ ಭಕ್ತವೃಂದದ 40ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಮಾರ್ಪಳ್ಳಿ ಗೆಳೆಯರ ಬಳಗ, ಮಹಿಳಾ ಮಂಡಳಿ, ಕುಕ್ಕಿಕಟ್ಟೆ ಆಟೋ ಮತ್ತು ಟೆಂಪೋ ಚಾಲಕರು ಮತ್ತು ಮಾಲಕರು, ಉಡುಪಿ ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್, ಕುಂದಾಪುರ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ಮಣಿಪಾಲ ಭಂಡಾರಿ ಪವರ್ ಲೈನ್ಸ್ ಪ್ರೈವೇಟ್ ಇವುಗಳ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ವನ್ನು ಶ್ರೀಅಯ್ಯಪ್ಪಸ್ವಾಮಿ ಮಂದಿರದಲ್ಲಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಸರ್ಜನ್ ಡಾ.ಎಚ್.ಅಶೋಕ್ ಮಾತನಾಡಿ, ಉಡುಪಿಗೆ ಸ್ಥಳೀಯ ಅಥವಾ ಜಿಲ್ಲೆಯ ರೋಗಿಗಳು ಮಾತ್ರವಲ್ಲದೆ ಹೋರರಾಜ್ಯದ ರೋಗಿಗಳು ಬರುತ್ತಾರೆ. ಆದ್ದರಿಂದ ಉಡುಪಿಯ ರಕ್ತ ಕೇವಲ ಉಡುಪಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಸ್ತುತ. ಪಾಸಿಟಿವ್ ರಕ್ತಕ್ಕಿಂದ ನೆಗೆಟಿವ್ ಗ್ರೂಪ್‌ನ ರಕ್ತದ ಕೊರತೆ ತುಂಬಾ ಇದೆ. ಒಬ್ಬರ ರಕ್ತ 5 ಜನರಿಗೆ ಜೀವದಾನ ನೀಡಬಲ್ಲದು ಎಂದರು.

ಅಧ್ಯಕ್ಷತೆಯನ್ನು ಭಂಡಾರಿ ಪವರ್ ಲೈನ್ಸ್‌ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಜ್ಞಾನನಂದ ಐರೋಡಿ ವಹಿಸಿದ್ದರು. ಈ ಸಂದರ್ಭದಲ್ಲಿ ಕುಂದಾಪುರದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಸಭಾಪತಿ ಜಯಕರ ಶೆಟ್ಟಿ, ಮಣಿಪಾಲ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸತೀಶ್ ಸಾಲಿಯನ್ ಮಣಿಪಾಲ, ಮಾರ್ಪಳ್ಳಿ ಗೆಳೆಯರ ಬಳಗ ಅಧ್ಯಕ್ಷ ವಿಜಯ್ ಆರ್. ನಾಯಕ್, ಮಾರ್ಪಳ್ಳಿಯ ಮಹಿಳಾ ಮಂಡಳಿಯ ಅಧ್ಯಕ್ಷೆ ಪುಷ್ಪಲತಾ ರಮಾನಂದ, ಕುಕ್ಕಿಕಟ್ಟೆ ಆಟೋ ಮತ್ತು ಟೆಂಪೋ ಚಾಲಕರ ಸಂಘದ ಕರುಣಾಕರ ಶೆಟ್ಟಿಗಾರ್, ಅಯ್ಯಪ್ಪ ಸ್ವಾಮಿ ಮಂದಿರದ ಗುರುಸ್ವಾಮಿ ವಸಂತ್ ಶೆಟ್ಟಿಗಾರ್ ಮಾರ್ಪಳ್ಳಿ, ಅಯ್ಯಪ್ಪಸ್ವಾಮಿ ಭಕ್ತವೃಂದ ಅಧ್ಯಕ್ಷ ಜಯಂತ್ ನಾಯಕ್ ಮಂಚಿ, ಶಿವರಾಂ, ಸಂದೀಪ್ ಕುಲಾಲ್, ಅನುರಾಧ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News